ಉತ್ತರಪ್ರದೇಶ: ನಾಲ್ವರು ಪುರುಷರು ಮಹಿಳೆಯ ಶವವೊಂದನ್ನು ದೋಣಿಯಲ್ಲಿ ಸಾಗಿಸಿ ಗಂಗಾ ನದಿಗೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಹಾಪುರ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವೀಡಿಯೊದಲ್ಲಿ, ದೋಣಿಯ ಮುಂಭಾಗದಲ್ಲಿ ಇರಿಸಲಾದ ಶವದ ಪಕ್ಕದಲ್ಲಿ ವ್ಯಕ್ತಿಯೊಬ್ಬರು ನಿಂತು ಅದು ಸರಿಯಾಗಿ ಬಿಗಿಯಾಗಿದೆಯೇ ಎಂದು ಪರೀಕ್ಷಿಸುತ್ತಿರುವುದನ್ನು ಕಾಣಬಹುದು. ಬಳಿಕ ಮೂವರು ಪುರುಷರು ಮಹಿಳೆಯ ದೇಹವನ್ನು ನೀರಿಗೆ ತಳ್ಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

@SachinGuptaUP ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಹಾಪುರ್ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ವೀಡಿಯೊದಲ್ಲಿ ಕಂಡುಬರುವ ಜನರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

कुछ लोग ब्रजघाट गंगा में एक लड़की की लाश फेंक रहे हैं। मेरे सोर्स के अनुसार, ऑनर किलिंग हुई और लाश को ठिकाने लगा दिया। #UttarPradsh pic.twitter.com/BnRCElEmjB

— Sachin Gupta (@Sachingupta) July 30, 2024