ಮಹಾರಾಷ್ಟ್ರ: ತನ್ನ ಮುದ್ದಿನ ಶ್ವಾನಕ್ಕೆ ಮಹಿಳೆಯೊಬ್ಬಳು ಚಿನ್ನದ ಸರ ಖರೀದಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬರೋಬ್ಬರಿ 2ಲಕ್ಷ ರೂಪಾಯಿ ಖರ್ಚು ಮಾಡಿ ತನ್ನ ಮುದ್ದಿನ ಶ್ವಾನಕ್ಕೆ ವಿಶೇಷ ಉಡುಗೊರೆ ನೀಡಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರೆಲ್ ಆಗಿದ್ದು ಲಕ್ಷಾಂತರ ನೆಟ್ಟಿಗರ ಮನಗೆದ್ದಿದೆ.
ಮಹಾರಾಷ್ಟ್ರದ ಅನಿಲ್ ಜುವೆಲ್ಲರಿಸ್ ಅವರು ತಮ್ಮ ಇನ್ಸ್ಟಾಗ್ರಾಮ್(aniljewellersofficial) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಜೂನ್ 16ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

