ನಾಯಿಯನ್ನು ತಮ್ಮ ಸ್ವಂತ ಮಕ್ಕಳಂತೆ ಸಾಕುವವರು ಈಗ ಹೆಚ್ಚಾಗಿದ್ದಾರೆ. ತಮ್ಮ ಮಕ್ಕಳಿಗೆ ಎನೆಲ್ಲಾ ಸೌಲಭ್ಯ ನೀಡುತ್ತಾರೋ ಅಷ್ಟೆ ಕಾಳಜಿ , ಸೌಲಭ್ಯ ಸಾಕು ನಾಯಿಗೂ ನೀಡುತ್ತಾರೆ . ಹಾಗಾಂತ ಇದು ಕೆಟ್ಟದಲ್ಲಾ ನಾಯಿ ಮಾನವರಿಗಿಂತಲೂ ನಿಯತ್ತಿನ ಪ್ರಾಣಿ. ಆದರೆ ಎಲ್ಲಾದಕ್ಕೂ ಮಿತಿ ಬೇಕು ಪ್ರೀತಿಯ ನಾಯಿಯೆಂದು ಅತಿಯಾಗಿ ತನ್ನಿಸಿದರೆ ಇದು ಅದರ ಸಾವಿಗೆ ಕಾರಣ ವಾಗಬಹುದು. ಇದೀಗ ಅಂತಹದ್ದೇ ಒಂದು ಗಟನೆ ನಡೆದಿದ್ದು, ಇಲ್ಲೊಬ್ಬ ಮಹಿಳೆ ತನ್ನ ಪ್ರೀತಿಯ ನಾಯಿಗೆ ಸಿಕ್ಕಿದ್ದೆಲ್ಲಾ ತಿನ್ನಿಸಿದ ಪರಿಣಾಮ ಕೊನೆಗೆ ನಾಯಿ ಕೊನೆಯುಸಿರೆಳೆದಿದೆ. ಇದೀಗ ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದ್ದು 2 ತಿಂಗಳ ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ನ್ಯೂಜಿಲೆಂಡ್​ನಲ್ಲಿ ನಡೆದಿದೆ.

ತನ್ನ ನಾಯಿಯ ವೈದ್ಯಕೀಯ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಲು ವಿಫಲರಾದ ಮಹಿಳೆಗೆ 720 ಡಾಲರ್​ ದಂಡ ವಿಧಿಸಲಾಯಿತು ಮತ್ತು ಒಂದು ವರ್ಷದವರೆಗೆ ನಾಯಿಯನ್ನು ಸಾಕದಂತೆ ನಿರ್ಬಂದ ಹೇರಲಾಗಿದೆ.