ಬಿಹಾರದಲ್ಲಿ ಸ್ವಂತ ಚಿಕ್ಕಪ್ಪನನ್ನೇ ಸೋದರನ ಮಗಳು ಪ್ರೇಮಿಸಿ ಮದುವೆಯಾಗಿದ್ದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಬೇಗುಸಾರೈದ ಮಹಾನಗರ ಪಾಲಿಕೆಯ ಉಪ ಆಯುಕ್ತ ಶಿವಶಕ್ತಿ ಕುಮಾರ್‌ ಲವ್ ಸ್ಟೋರಿ ತೀವ್ರ ವಿವಾದಕ್ಕೆ ಗುರಿಯಾಗಿದೆ.

ಶಿವಶಕ್ತಿ ಕುಮಾರ್ ಹಾಗೂ ಸಜಲ್ ಸಿಂಧು ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 31 ವರ್ಷದ ಮಹಾನಗರ ಪಾಲಿಕೆಯ ಡೆಪ್ಯುಟಿ ಕಮಿಷನರ್ ಶಿವಶಕ್ತಿ ಕುಮಾರ್ 24 ವರ್ಷದ ಸಜಲ್ ಸಿಂಧು ಅವರನ್ನು ಮದುವೆ ಕೂಡ ಆಗಿದ್ದಾರೆ. ಇವರು ಹೊರ ಜಗತ್ತಿಗೆ ಪ್ರೇಮಿಗಳೇ ಆದರೂ ಕೂಡ ಸಂಬಂಧದಲ್ಲಿ ಚಿಕ್ಕಪ್ಪ ಮಗಳು ಆಗಬೇಕು.

ವಿಡಿಯೋವೊಂದರಲ್ಲಿ ಮಾತನಾಡಿದ ಸಜಲ್ ಸಿಂಧು, ಪ್ರೀತಿಯಲ್ಲಿ ಬೀಳುವುದು ನಮ್ಮ ವೈಯಕ್ತಿಕ ಆಯ್ಕೆ. ಇದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ. ನಮ್ಮ ಸಂಬಂಧವನ್ನು ಅಂತ್ಯಗೊಳಿಸಲು ಕುಟುಂಬದವರು ಕಾನೂನಿನ ಮೂಲಕ ಪ್ರಯತ್ನಿಸುತ್ತಿದ್ದಾರೆ. ಆದ್ರೆ ನಮಗೆ ಸಂವಿಧಾನದಲ್ಲಿ ಈ ರೀತಿಯ ಒಂದು ಮದುವೆಯಾಗಲಿಕ್ಕೆ ಅವಕಾಶವಿದೆ. ನಾವಿಬ್ಬರು 10 ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮ ವಿರುದ್ಧ ಕುಟುಂಬಸ್ಥರು ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಸಜಲ್ ಸಿಂಧು ಕುಟುಂಬಸ್ಥರಂತೂ ಇದು ಸಾಧ್ಯವೇ ಇಲ್ಲ. ಇವರಿಬ್ಬರು ಒಟ್ಟಿಗೆ ದಾಂಪತ್ಯ ಜೀವನ ಸಾಗಿಸಬಾರದು ಎಂದು ಪಟ್ಟು ಹಿಡಿದಿದ್ದಾರೆ. ಇದೇ ನೋಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

— FirstBiharJharkhand (@firstbiharnews) August 22, 2024