Bengaluru 28°C
Ad

ಸ್ಟ್ಯಾಂಡ್​ನೊಳಗಡೆ ನುಗ್ಗಿ ಚೆಂಡು ಹುಡುಕಾಡಿದ ವಿರಾಟ್​ ಕೊಹ್ಲಿ; ವಿಡಿಯೋ ವೈರಲ್​

ವಿರಾಟ್​ ಕೊಹ್ಲಿ ಅವರು ಗಲ್ಲಿ ಕ್ರಿಕೆಟ್​ನಲ್ಲಿ ಚೆಂಡನ್ನು ಹುಡುಕಿದಂತೆ ಸ್ಟೇಡಿಯಂನ ಸ್ಟ್ಯಾಂಡ್​ವೊಂದರ ಒಳಗಡೆ ನುಗ್ಗಿ ಚೆಂಡು ಹುಡುಕುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.

ಆ್ಯಂಟಿಗುವಾ: ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಸೂಪರ್‌-8 ಪಂದ್ಯದಲ್ಲಿ ಭಾರತ 50 ರನ್ ಗಳ ಅಮೋಘ ಜಯ ಸಾಧಿಸಿ ಸೆಮಿಫೈನಲ್​ ಸನಿಹಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಗಲ್ಲಿ ಕ್ರಿಕೆಟ್​ನಲ್ಲಿ ಚೆಂಡನ್ನು ಹುಡುಕಿದಂತೆ ಸ್ಟೇಡಿಯಂನ ಸ್ಟ್ಯಾಂಡ್​ವೊಂದರ ಒಳಗಡೆ ನುಗ್ಗಿ ಚೆಂಡು ಹುಡುಕುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.

Ad
300x250 2

ಬಾಂಗ್ಲಾದೇಶ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಈ ಘಟನೆ ಸಂಭವಿಸಿದೆ. ಸಿಕ್ಸರ್​ಗೆ ಚಿಮ್ಮಿದ ಚೆಂಡು ಬೌಂಡರಿ ಲೈನ್​ನ ಹೊರ ಭಾಗದಲ್ಲಿ ಇರಿಸಲಾಗಿದ್ದ ಸ್ಟ್ಯಾಂಡ್​ ಒಂದರ ಕೆಳ ಭಾಗಕ್ಕೆ ಹೋಯಿತು. ಬೌಂಡರಿ ಲೈನ್​ ಬಳಿ ಫೀಲ್ಡಿಂಗ್​ ನಡೆಸುತ್ತಿದ್ದ ವಿರಾಟ್​ ಕೊಹ್ಲಿ ಅವರು ಚೆಂಡನ್ನು ತೆಗೆಯಲು ಈ ಸ್ಟ್ಯಾಂಡ್​ ಒಳಗಡೆ ನುಗ್ಗಿ ಕೊನೆಗೂ ಚೆಂಡನ್ನು ಹೊರ ತೆಗೆದಿದ್ದಾರೆ.

ಕೊಹ್ಲಿಯ ಈ ಸರಳತೆಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೆಲ ನೆಟ್ಟಿಗರು ಗಲ್ಲಿ ಕ್ರಿಕೆಟ್​ನ ನೆನೆಪು ಮತ್ತೆ ಮರುಕಳಿಸಿದ್ದಕ್ಕೆ ಧನ್ಯವಾದಗಳು ಕೊಹ್ಲಿ ಸರ್​ಎಂದು ಕಮೆಂಟ್​ ಮಾಡಿದ್ದಾರೆ.

 

https://x.com/srk0804/status/1804575433016627663?

 

 

Ad
Ad
Nk Channel Final 21 09 2023
Ad