ರೈಲ್ವೇ ತನ್ನ ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ನಿಯಮಗಳನ್ನು ಮಾಡಿದ್ದರೂ, ಜನರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇದೀಗ ಇದಕ್ಕೊಂದು ಉತ್ತಮ ಉದಾಹರಣೆ ಎಂಬ ಪೋಸ್ಟ್​​ ಒಂದು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ. ರೈಲಿನ ಬೋಗಿಯ ಒಳಗೆ ಅಣಬೆಗಳು ಬೆಳೆದಿರುವ ಫೋಟೋಗಳನ್ನು ಟ್ವಟಿರ್​ ಬಳಕೆದಾರೊಬ್ಬರು ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

@B7801011010 ಎಂಬ ಟ್ವಿಟರ್​​ ಖಾತೆಯಲ್ಲಿ ರೈಲು ಬೋಗಿಯ ಒಳಗೆ ಬೆಳೆದ ಅಣಬೆಗಳ ಫೋಟೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. ಆಗಸ್ಟ್​​​ 20 ರಂದು ಹಂಚಿಕೊಂಡಿರುವ ಈ ಪೋಸ್ಟ್​​​ ಕೇವಲ ಎರಡು ದಿನಗಳಲ್ಲಿ 92 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಪ್ಯಾಸೆಂಜರ್ ರೈಲಿನ ಬೋಗಿಯಲ್ಲಿ ಅಣಬೆಗಳು ಬೆಳೆದಿರುವುದು ಪ್ರಯಾಣಿಕರಿಗೆ ಕಂಡು ಬಂದಿದೆ. ಬೋಗಿಯ ಮೇಲ್ಭಾಗದಲ್ಲಿ ಐದಾರು ಅಣಬೆಗಳು ಬೆಳೆದಿದ್ದು, ಅದನ್ನು ನೋಡಿದ ಪ್ರಯಾಣಿಕರೊಬ್ಬರು ಕೂಡಲೇ ತಮ್ಮ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.ಸದ್ಯ ಈ ವಿಡಿಯೋ ವೈರಲ್‌ ಆಗ್ತಿದೆ.

Vegetarian passengers travelling long journeys can now pluck their own mushrooms in 2 or 3 days' travel. pic.twitter.com/ceZH8mxpLc

— Брат (@B7801011010) August 20, 2024