ವೈರಲ್ : ಈ ಮಳೆಗೂ ಪ್ರೇಮಿಗಳಿಗೂ ಅವಿನಾಭಾವ ಸಂಬಂಧ ಎಂಬಂತೆ ಜೋಡಿ ಹಕ್ಕಿಯೊಂದು ಮೈಮರೆತು ಮಳೆಯಲ್ಲಿ ನೆನೆಯುತ್ತಾ ರೊಮ್ಯಾನ್ಸ್ ಮಾಡಿದ್ದು, ಈ ದೃಶ್ಯವನ್ನು ಯಾರೋ ಕದ್ದು ಮುಚ್ಚಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋವನ್ನು ವಿಜಯ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಟೆರೇಸ್ ಮೇಲಿನ ಕಾಂಪೌಂಡ್ ಈ ಬದಿಯಲ್ಲಿ ಹುಡುಗಿ ಹಾಗೂ ಆ ಬದಿಯಲ್ಲಿ ಯುವಕನೊಬ್ಬ ಮಳೆಯಲ್ಲಿ ನಿಂತಿರುವುದನ್ನು ಕಾಣಬಹುದು. ಹೀಗೆ ಖುಷಿಯಲ್ಲಿ ಮಳೆಯಲ್ಲಿ ನೆನೆಯುತ್ತಾ ಆ ಯುವತಿ ಸೀದಾ ಬಂದು ಕಾಂಪೌಂಡ್ ಹತ್ತಿ ಯುವಕನಿಗೆ ಪ್ರೀತಿಯ ಮುತ್ತನ್ನು ನೀಡಿದ್ದಾಳೆ.
ಮನೆಯ ಟೆರೇಸ್ ಮೇಲೆ ಸೋನೆ ಮಳೆಯಲ್ಲಿ ನೆನೆಯುತ್ತಾ ಜೋಡಿ ಹಕ್ಕಿ ಫಿಲ್ಮಿ ಸ್ಟೈಲ್‌ನಲ್ಲಿ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯವನ್ನು ಕಂಡು ನೆಟ್ಟಿಗರು ಬಾರಿ ಮೇಲೆ ಬೆರೆಳಿಟ್ಟುಕೊಂಡಿದ್ದಾರೆ.
Baarish ka sahi istemal karna koi inse sikhe !! pic.twitter.com/qXzZQ9L2nH
— Vijay (@veejuparmar) July 3, 2024

