ಕೆ.ಆರ್ ಪೇಟೆ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಖಾಸಗಿ ಶಾಲೆ ಬಸ್ ತಡೆದು ಪುಂಡರು ಕಿರಿಕ್ ಮಾಡಿದ್ದಾರೆ. ಕೀ ಕಿತ್ತುಕೊಳ್ಳಲು ಬಂದ ವಿಡಿಯೋ ವೈರಲ್ ಆಗಿದೆ.

ಶಾಲಾ ಮಕ್ಕಳನ್ನು ಗ್ರಾಮಗಳಿಗೆ ಬಿಡಲು ಹೋಗುತ್ತಿದ್ದ ಖಾಸಗಿ ಶಾಲೆಯ ಬಸ್ ತಡೆದು ಪುಂಡರ ಪುಂಡಾಟ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಿಕ್ಕೇರಿ  ಖಾಸಗಿ ಶಾಲಾ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಿದ್ದಾರೆ.