ಥಿಯೇಟರ್​​ನಲ್ಲಿ ಸಿನಿಮಾ ಶುರುವಾಗೋ ಮೊದಲು ನಾವೆಲ್ಲ ಒಂದು ಜಾಹೀರಾತನ್ನು ನೋಡಿರಬಹುದು. ಅದೇ ಧೂಮಪಾನ ಹಾನಿಕಾರ ಎಂಬ ಜಾಹೀರಾತು. ಇನ್ಮುಂದೆ ಥಿಯೇಟರ್​ನಲ್ಲಿ ಈ ಜಾಹೀರಾತು ಕಾಣಿಸೋದಿಲ್ಲ.

ಥಿಯೇಟರ್​ಗೆ ಹೋದಾಗ ‘ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಒಳ್ಳೆಯ ಗಂಡ, ಎರಡು ಮುದ್ದಿನ ಮಕ್ಕಳು. ಆದರೆ, ತಂಬಾಕು ಎಲ್ಲವನ್ನೂ ಕೆಡಿಸಿಬಿಡ್ತು. ಈಗ ಹರಡುತ್ತಿರುವ ಈ ಕ್ಯಾನ್ಸರ್​ನ ನನ್ನ ಮುಖದಿಂದ ಕತ್ತರಿಸಿ ತೆಗಿಯಬೇಕಾಗಿದೆ. ಇನ್ನು ಯಾವುದೂ ಮೊದಲಿನ ಥರ ಇರಕ್ಕಾಗಲ್ಲ. ತಂಬಾಕು ನನ್ನ ಬದುಕನ್ನೇ ಸರ್ವನಾಶ ಮಾಡಿಬಿಡ್ತು’ ಎಂಬ ತಂಬಾಕು ಸೇವನೆಯ ಜಾಗೃತಿ ಬಗೆಗಿನ ವಿಡಿಯೋ ನಾವೆಲ್ಲಾ ನೋಡಿಯೇ ಇರುತ್ತೇವೆ.

ಈ ಜಾಹೀರಾತಿನ ಬದಲಿಗೆ ಇದೀಗ ಥಿಯೇಟರ್​​ನಲ್ಲಿ ಹೊಸದಾಗಿ ಜಾಹೀರಾತೊಂದು ಬಂದಿದೆ. ಈ ಮೊದಲು ತಂಬಾಕು ತಿನ್ನೋದ್ರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತೆ, ಆಕೆ ಎದುರಿಸಿದ ಕಷ್ಟಗಳೇನು ಎಂಬುದರ ಬಗ್ಗೆ ಸುನಿತಾ ಹೇಳಿದ್ದರು. ಆದ್ರೆ ಇನ್ಮುಂದೆ ಈ ವಿಡಿಯೋ ಬದಲಿಗೆ ಓಂ ಪ್ರಕಾಶ್ ಹೆಸರಿನ ವ್ಯಕ್ತಿಯೊಬ್ಬನ ಜಾಹೀರಾತು ಕಾಣಿಸಲಿದೆ.
ಈ ವಿಡಿಯೋದಲ್ಲಿ ಓಂ ಪ್ರಕಾಶ್​ ತಂಬಾಕು ತಿಂದು ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ ಎಂಬುದನ್ನು ಮಾಹಿತಿ ನೀಡುತ್ತಾರೆ.

ತಂಬಾಕು ಮಾತ್ರವಲ್ಲದೆ ಇದುವರೆಗಿದ್ದ, ಧೂಮಪಾನದ ಜಾಹೀರಾತಲ್ಲೂ ಚೇಂಜಸ್ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಹೊಸ ಜಾಹೀರಾತಿನಲ್ಲಿ ಸಿಗರೇಟ್​​ ಸೇದುವುದನ್ನು ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಕಾಣಬಹುದು ಎಂದು ತಿಳಿಸಲಾಗಿದೆ. ಇನ್ನು ಈ ಜಾಹೀರಾತು ಆಗಸ್ಟ್​ 23 ರಿಂದ ಪ್ರದರ್ಶನ ಕಾಣುತ್ತಿದೆ.