ಉತ್ತರ ಪ್ರದೇಶ: ಬೈಕ್‌ ನಲ್ಲಿ ಬರುತ್ತಿದ್ದ ಮಹಿಳೆಯ ಮೇಲೆ ಕೆಲವು ಪುಂಡರು ನೀರು ಎರಚಿ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಬಳಿ ಇರುವ ತಾಜ್ ಹೋಟೆಲ್ ಸೇತುವೆಯ ಬಳಿ ನಡೆದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. ಮಹಿಳೆಯೊಬ್ಬರು ವ್ಯಕ್ತಿಯೊಂದಿಗೆ ಜಲಾವೃತವಾದ ರಸ್ತೆಯಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದರು. ಕೆಲವು ಯುವಕರು ಅದೇ ನೀರಿನಲ್ಲಿ ಆಟವಾಡುತ್ತಿದ್ದರು, ಈ ಬೈಕ್​ ಆ ದಾರಿಯಲ್ಲಿ ಹೋಗುತ್ತಿದ್ದಂತೆ ನೀರನ್ನು ಬೈಕ್​ ಮೇಲೆ ಎರಚಲು ಶುರು ಮಾಡಿದ್ದರು. ಬಳಿಕ ಬೈಕ್​ ಮುಂದೆ ಹೋಗದಂತೆ ತಡೆದ ಬಳಿಕ ಬೈಕ್​ನಲ್ಲಿದ್ದ ಮಹಿಳೆ ಸೇರಿ ಇಬ್ಬರು ಸವಾರರು ಕೆಳಗೆ ನೀರಿನಲ್ಲಿ ಬಿದ್ದಿದ್ದಾರೆ.

ಆದರೂ ಅವರು ನೀರನ್ನು ಎರಚುವುದನ್ನು ಬಿಟ್ಟಿರಲಿಲ್ಲ. ಮಹಿಳೆಯನ್ನು ಕೂಡಲೇ ಅಲ್ಲಿದ್ದವರ್ಯಾರೋ ಕೆಳಗಿನಿಂದ ಮೇಲಕ್ಕೆ ಎತ್ತಿದ್ದಾರೆ. ಪೊಲೀಸರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.

https://x.com/ians_india/status/1818618356074705185?