ಡೆಹ್ರಾಡೂನ್: ಪ್ರವಾಸಿಗರು ತಮ್ಮ ಪಾದರಕ್ಷೆಗಳನ್ನು ದೇವಾಲಯದ ಆವರಣದಲ್ಲಿ ಬಿಟ್ಟು ಹೋಗುತ್ತಿದ್ದರು. ಇದನ್ನು ಪ್ರತಿ ದಿನ ಕಂಡು ಬೇಸತ್ತ ಡೆಹ್ರಾಡೂನ್ನ ದೇವಾಲಯದ ಸಿಬ್ಬಂಧಿ ವಿಷಯ ಗಂಭೀರವಾಗಿ ತೆಗೆದುಕೊಂಡಿದ್ದು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸಂದೇಶವನ್ನು ಕಳುಹಿಸಲು ಬೆಟ್ಟದ ಮೇಲಿಂದ ಬೂಟುಗಳು ಮತ್ತು ಚಪ್ಪಲಿಗಳನ್ನು ಎಸೆದಿದ್ದಾರೆ. ಇದೀಗ ವಿಡಿಯೋ ಎಲ್ಲಡೆ ಭಾರಿ ವೈರಲ್‌ ಆಗುತ್ತಿದೆ.

ಬೆಟ್ಟದ ಮೇಲೆ ನಿಂತಿರುವ ಭದ್ರಜ್ ದೇವಾಲಯವು ಭಗವಾನ್ ಬಲಭದ್ರನಿಗೆ (ಬಲರಾಮ ಎಂದೂ ಕರೆಯುತ್ತಾರೆ) ಸಮರ್ಪಿತವಾದ ಸುಂದರವಾದ ಅಮೃತಶಿಲೆಯ ದೇವಾಲಯವಾಗಿದೆ. ಈ ದೇವಾಲಯವು ಉತ್ತರಾಖಂಡದ ಮಸ್ಸೂರಿಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ ಮತ್ತು ಸಣ್ಣ ಚಾರಣದ ಮೂಲಕ ಕೂಡ ದೇವಾಸ್ಥಾನಕ್ಕೆ ತಲುಪಬಹುದು.

ಭಕ್ತರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ದೇವಾಲಯಕ್ಕೆ ಸೇರಿದರೆ, ಇನ್ನೂ ಕೆಲವರು ಕೆಳಗಿರುವ ಡೂನ್ ಕಣಿವೆಯ ಅದ್ಭುತ ನೋಟಗಳಿಗಾಗಿ ಕೂಡ ಸಾವಿರಾರು ಮಂದಿ ಬರುತ್ತಾರೆ.

ಇನ್ನು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಡೋಗ್ರಾ, ಹೊರಗಿನವರು ನಮ್ಮ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದಾಗ ಮತ್ತು ಸ್ಪಷ್ಟ ಸೂಚನೆಗಳ ಹೊರತಾಗಿಯೂ, ತಮ್ಮ ಬೂಟುಗಳು ಮತ್ತು ಚಪ್ಪಲಿಗಳನ್ನು ದೇವಾಲಯದ ಒಳಗೆ ತಂದಾಗ ಇಂತಹ ಘಟನೆ ಸಂಭವಿಸುತ್ತದೆ” ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.