ಮುಂಬೈ: ತಾಯಿಯೊಬ್ಬಳು ಕಠಿಣ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಬಂದ ತನ್ನ ಮಗನನ್ನು ತಬ್ಬಿಕೊಂಡು ತನ್ನ ಸಂತೋಷವನ್ನು ವ್ಯಕ್ತಪಡಿಸಿರುವ ಎಲ್ಲೆಡೆ ವಿಡಿಯೋ ವೈರಲ್ ಆಗಿದೆ.

ಯೋಗೇಶ್ ಎಂಬ ಯುವಕ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈ ವಿಚಾರವನ್ನು ತನ್ನ ತಾಯಿಗೆ ಹೇಳಿದ್ದಾನೆ. ಆಗ ತಾಯಿ ತನ್ನ ಮಗನ ಸಾಧನೆಯ ಬಗ್ಗೆ ಹೆಮ್ಮೆಯಿಂದ ಅವನನ್ನು ನೋಡಿ ಭಾವುಕಳಾಗಿ ತಬ್ಬಿಕೊಂಡು ಸಂತೋಷದ ಕಣ್ಣೀರನ್ನು ಸುರಿಸಿದ್ದಾಳೆ.

ಅವನ ತಾಯಿ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾಳೆ. ವಿಡಿಯೋದಲ್ಲಿ ಮಗ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದನ್ನು ಹೇಳಿದ ತಕ್ಷಣ ನೆಲದಲ್ಲಿ ಕುಳಿತ ತಾಯಿ ಎದ್ದು ನಿಂತು ತನ್ನ ಮಗನನ್ನು ತಬ್ಬಿಕೊಂಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಇದರ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ ಮತ್ತು ಅನೇಕ ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.