ಆಂಧ್ರಪ್ರದೇಶ: ಕಾಗೆ ಅಂಗಡಿ ಬಳಿ ದಿನ ಕಿರುಚುತ್ತಿದೆ ಎಂದು ಮಟನ್ ಅಂಗಡಿ ಮಾಲೀಕ ಅದನ್ನು ಹಿಡಿದುಕೊಂಡು ಅಂಗಡಿ ಬಳಿ ಬಂಧಿಸಿರುವ ಘಟನೆ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ತತಿಪಾಕಾ ಮಾರುಕಟ್ಟೆಯಲ್ಲಿ ನಡೆದಿದೆ.
ಕಾಗೆ ಕಿರುಚುತ್ತಿದೆ ಅಂಥ ಹೇಳಿ ಮಟನ್ ಚಿಕನ್ ಅಂಗಡಿ ಮಾಲೀಕ ಕಾಗೆ ಕಾಲಿಗೆ ಹಗ್ಗದಿಂದ ಕಟ್ಟಿದ್ದಾನೆ. ಇದರಿಂದ ಕಾಗೆ ಕೂಗಲು ಪ್ರಾರಂಭಿಸಿದೆ. ಪರಿಣಾಮ ಇದರ ಬೆನ್ನಲೇ ನೂರಾರು ಕಾಗೆಗಳು ಸ್ಥಳಕ್ಕೆ ತಲುಪಿ ಕೂಗಲು ಪ್ರಾರಂಭಿಸಿದವು.

ಎಲ್ಲಾ ಕಾಗೆಗಳು ಕಿರುಚಿದ್ದರಿಂದ ಉಳಿದ ಅಂಗಡಿಯವರಿಗೆ ಶಬ್ದವನ್ನು ಸಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮಟನ್ ಅಂಗಡಿ ಮಾಲೀಕ ಕಟ್ಟಿ ಹಾಕಿದ್ದ ಕಾಗೆಯನ್ನು ಮುನಃ ಬಿಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದಾಗ್ಯೂ, ವೀಡಿಯೊವನ್ನು ನೋಡಿದ ನೆಟ್ಟಿಗರು “ಏಕತೆಯೇ ದೊಡ್ಡ ಶಕ್ತಿ” ಎಂದು ಕಾಮೆಂಟ್ ಮಾಡಿದ್ದಾರೆ.

