ಮುಂಬೈ: ಡ್ರಗ್ಸ್ ಪತ್ತೆ ದಾಳಿ ವೇಳೆ ವ್ಯಕ್ತಿಯೊಬ್ಬನ ಜೇಬಿನಲ್ಲಿ ಪೊಲೀಸರೇ ಡ್ರಗ್ಸ್ ಹಾಕಿ ಅವರನ್ನು ಬಂಧಿಸಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು ಜನ ಪೊಲೀಸರ ಬಳಿ ಹೋದರೆ ನ್ಯಾಯ ಸಿಗುತ್ತದೆಂಬ ನಂಬಿಕೆಯನ್ನೇ ಸುಳ್ಳಾಗಿಸಿದೆ.

ಪೊಲೀಸರ ಈ ಕೃತ್ಯದ ವಿಡಿಯೋ ವೈರಲ್ ಆದ ನಂತರ ನಾಲ್ವರು ಮುಂಬೈ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮುಂಬೈ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳದ ಸಬ್ ಇನ್‌ಸ್ಪೆಕ್ಟರ್ ಮತ್ತು ಮೂವರು ಕಾನ್‌ಸ್ಟೆಬಲ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ ನಗರದ ಕಲಿನಾ ಪ್ರದೇಶದಲ್ಲಿ ಮಫ್ತಿಯಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ದಾಳಿ ನಡೆಸುತ್ತಿರುವುದನ್ನು ತೋರಿಸುವ ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಾಳಿಯ ಸಮಯದಲ್ಲಿ ಒಬ್ಬ ಅಧಿಕಾರಿಯು ವ್ಯಕ್ತಿಯ ಪ್ಯಾಂಟ್ ಜೇಬಿನೊಳಕ್ಕೆ ಅನುಮಾನಾಸ್ಪದ ವಸ್ತು ಹಾಕುವುದನ್ನ ಕಾಣಬಹುದು.

ಖಾರ್ ಪೊಲೀಸ್ ಠಾಣೆಯ ಭಯೋತ್ಪಾದನಾ ನಿಗ್ರಹ ದಳಕ್ಕೆ ಸೇರಿದ ನಾಲ್ವರು ಪೊಲೀಸರು ಶುಕ್ರವಾರ ಸಂಜೆ ನಗರದ ಕಲಿನಾ ಪ್ರದೇಶದಲ್ಲಿ ದಾಳಿ ನಡೆಸಿ ಡೇನಿಯಲ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

— فیضان خان FaizanKhan (@journofaizan) August 31, 2024