ಇಲ್ಲೊಬ್ಬ ಯುವಕ ತನ್ನ ಪ್ರಿಯತಮೆಗೆ ಪ್ರೀತಿಯಿಂದ ಲಿಪ್ ಟು ಲಿಪ್ ಕಿಸ್ ಕೊಡಲು ಹೋಗಿ ದೊಡ್ಡ ಪಜೀತಿ ಮಾಡಿಕೊಂದಿದ್ದಾನೆ. ಆತ ಲಿಪ್ ಕಿಸ್ ಕೊಡಲು ಹೋಗಿ ಅದೇನಾಯ್ತೋ ಗೊತ್ತಿಲ್ಲ ಡೈರೆಕ್ಟ್ ಪ್ರೇಯಸಿಯ ಬಾಯಿಗೆಯೇ ವಾಂತಿ ಮಾಡಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಈ ದೃಶ್ಯ ನೋಡಿ ಇದೆಂತಾ ಅವಸ್ಥೆ ಮಾರ್ರೆ ಎಂದು ನೆಟ್ಟಿಗರು ನಕ್ಕಿದ್ದಾರೆ.

ಯಾರಾದ್ರೂ ವಾಂತಿ ಮಾಡ್ತಿದ್ದಾರೆ ಅಂದ್ರೆನೇ ಎಲ್ರೂ ಮಾರು ದೂರ ಓಡಿ ಹೋಗ್ತಾರೆ. ಆದ್ರೆ ಇಲ್ಲೊಬ್ಬ ಯುವಕ ಮುತ್ತು ಕೊಡಲು ಹೋದಾಗ ತನ್ನ ಗೆಳತಿಯ ಬಾಯಿಗೆಯೇ ವಾಂತಿ ಮಾಡಿಕೊಂಡಿದ್ದಾನೆ. ಈ ಕುರಿತ ಪೋಸ್ಟ್ ಒಂದನ್ನು sindicatodedomm ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲಿಯೇ ತನ್ನ ಪ್ರೇಯಸಿಗೆ ಪ್ರೀತಿಯಿಂದ ಲಿಪ್ ಕಿಸ್ ಮಾಡುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಪರಸ್ಪರ ಲಿಪ್ ಲಾಕ್ ಮಾಡಲು ಹೋಗಿ, ಪ್ರೇಯಸಿಯ ಬಾಯಿಗೆಯೇ ವಾಂತಿ ಮಾಡಿಕೊಂದಿದ್ದಾನೆ.

https://twitter.com/i/status/1825586673922474150