ಚೆನ್ನೈ : ಇಲ್ಲೊಂದು ಹುಡುಗಿ ತನ್ನ ಭುಜದ ಮೇಲೆ ಕೈ ಹಾಕಿದ ತಮಿಳು ನಟ ದಳಪತಿ ವಿಜಯ್ ಗೆ ಕೈ ತೆಗೆಯುವಂತೆ ಹೇಳಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ವಿಜಯ್ ಜೂನ್ 28ರಂದು, ಚೆನ್ನೈನಲ್ಲಿ ತಮಿಳಗ ವೆಟ್ರಿ ಕಳಗಂ ಆಯೋಜಿಸಿದ್ದ ಎರಡನೇ ವಾರ್ಷಿಕ ಶಿಕ್ಷಣ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗಿತ್ತು.
ಆ ವೇಳೆ ಉತ್ತಮ ಅಂಕ ಪಡೆದು ಗೌರವಿಸಲ್ಪಟ್ಟ ಹುಡುಗಿಯೊಬ್ಬಳ ಭುಜದ ಮೇಲೆ ನಟ ವಿಜಯ್ ಕೈ ಹಾಕಿದ್ದು, ತಕ್ಷಣ ಆ ಹುಡುಗಿ ತನ್ನ ಭುಜದ ಸುತ್ತಲಿನ ಕೈಯನ್ನು ತೆಗೆಯುವಂತೆ ವಿಜಯ್‌ಗೆ ಹೇಳಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಹುಡುಗಿ ತನ್ನ ಭುಜದ ಸುತ್ತಲಿನ ಕೈಯನ್ನು ತೆಗೆಯುವಂತೆ ನಟ ವಿಜಯ್‌ನನ್ನು ಕೇಳುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೋ ಶೀರ್ಷಿಕೆಯಲ್ಲಿ ನಟನನ್ನು ಟೀಕಿಸಲಾಗಿತ್ತು.

