ತಮಿಳುನಾಡು: ತಮಿಳುನಾಡಿನ ನಾಮಕ್ಕಲ್ನಲ್ಲಿಭಯಾನಕ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್ನಿಂದ ಕೆಳಗೆ ಬಿದ್ದಿದ್ದಾರೆ. ಆ ಸಮಯದಲ್ಲಿ ಬಸ್ನ ವೇಗವೂ ಹೆಚ್ಚಿತ್ತು, ಈ ದೃಶ್ಯ ಖಾಸಗಿ ಬಸ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿವೆ.
ಶಾರದಾ ಎಂಬ ಮಹಿಳೆ ಬಟ್ಟೆ ಖರೀದಿಸಲು ಜೇಡರಪಾಳ್ಯಂನಿಂದ ಸೇಲಂಗೆ ತೆರಳಿದ್ದು, ಖಾಸಗಿ ಬಸ್ನಲ್ಲಿ ಮನೆಗೆ ಮರಳುತ್ತಿದ್ದರು. ಆಕೆ ಬಸ್ನಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿದ್ದಾರೆ, ಗಾಬರಿಗೊಂಡ ಪ್ರಯಾಣಿಕರು ಕಂಡಕ್ಟರ್ಗೆ ಮಾಹಿತಿ ನೀಡಿ ಬಸ್ ನಿಲ್ಲಿಸಿದ್ದಾರೆ. ಪ್ರಯಾಣಿಕರು ಶಾರದಾಗೆ ಸಹಾಯ ಮಾಡಿದರು. ಚಿಕಿತ್ಸೆಗಾಗಿ ಸೇಲಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಗಂಭೀರವಾಗಿ ಗಾಯಗೊಂಡಿದ್ದರೂ ಜೀವಕ್ಕೆ ಅಪಾಯವಿಲ್ಲ ಎಂಬುದು ತಿಳಿದುಬಂದಿದೆ. ಈ ವಿಡಿಯೋದಲ್ಲಿ ಹಲವು ಮಹಿಳೆಯರು ನಿಂತು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ.
ராசிபுரம் அருகே ஓடும் பஸ்ஸிலிருந்து தூக்கி வீசப்படும் பெண்ணின் பதபதைக்க வைக்கும் காட்சிகள்.#Rasipuram #namakkalnews #Namakkal #CCTVFootage #viralreels #accident #cctv #viral pic.twitter.com/uhzEQDrNya
— SitthaBhuthan | Gowrisankar (@b_gowrisankar22) July 3, 2024

