ದೆಹಲಿ: ಇಬ್ಬರು ಸ್ನೇಹಿತರು ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದಾಗ ಹೊರಗೆ ಅಳವಡಿಸಿದ್ದ ಎಸಿ ಬಾಕ್ಸ್ ಎರಡನೇ ಮಹಡಿಯಿಂದ ಬಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆತನ ಸ್ನೇಹಿತ ಪ್ರಾಂಶು ಕೂಡ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ, ಜಿತೇಶ್ ಡೋರಿವಾಲನ್ ಪ್ರದೇಶದಲ್ಲಿ ಸ್ಕೂಟರ್‌ನಲ್ಲಿ ಕುಳಿತು ಪ್ರಾಂಶು ಅವರೊಂದಿಗೆ ಮಾತನಾಡುತ್ತಿದ್ದಾಗ ಎಸಿಯ ಹೊರಾಂಗಣ ಘಟಕ ಅವರ ಮೇಲೆ ಬಿದ್ದು ಇಬ್ಬರಿಗೂ ಗಾಯಗಳಾಗಿತ್ತು.
ಎರಡನೇ ಮಹಡಿಯಿಂದ ಇಬ್ಬರು ಬಾಲಕರ ಮೇಲೆ ಘಟಕ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಜಿತೇಶ್ ಆಗಮನದ ವೇಳೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ಆದರೆ ಪ್ರಾಂಶು ಅವರನ್ನು ದಾಖಲಿಸಲಾಯಿತು ಎಂದು ಅಧಿಕಾರಿ ಹೇಳಿದರು.
Life is So Unpredictable man💔 (The other guy hugged him to say goodbye, an AC fell down, and he d!ed on the spot. Everything happened within seconds)
pic.twitter.com/tDZrDZFaax
— Ghar Ke Kalesh (@gharkekalesh) August 19, 2024

