ಮುಂಬೈ: ಫರ್ಹಾತ್ ಅಜಂ ಶೇಕ್​, ಹದಿಹರೆಯದ ವಯಸ್ಸಿನ ಮುಂಬೈ ನಿವಾಸಿ. ಸ್ಟಂಟ್ ಮಾಡುವ ಆತ, ಅದನ್ನು ವಿಡಿಯೋ ಮಾಡಿಕೊಂಡು ಸಾಹಸ ಮೆರೆಯುವ ಹುಚ್ಚೊಂದು ಅಂಟಿಕೊಂಡುಬಿಟ್ಟಿತ್ತು. ಅದೇ ಸಾಹಸ ಈಗ ಅವನನ್ನು ಯಾವ ಗತಿಗೆ ತಂದಿದೆ.

ಹೌದು. . ಓಡುವ ರೈಲಿನಲ್ಲಿ ಸ್ಟಂಟ್ ಮಾಡುವ ಹುಚ್ಚಾಟ, ಒಂದು ಕೈ, ಕಾಲು ಕಳೆದುಕೊಂಡ ಹುಡುಗ ಈ ಫರ್ಹಾತ್ ಅಜಂ ಶೇಕ್.ಈತ ಮಾರ್ಚ್​ 7 ರಂದು ಸೇವ್ರಿ ರೇಲ್ವೆ ಸ್ಟೇಷನ್ ವ್ಯಾಪ್ತಿ ಓಡುವ ರೈಲಿನಲ್ಲಿ ಸ್ಕೆಟಿಂಗ್ ಸ್ಟಂಟ್ಸ್ ಮಾಡಿದ್ದ ವಿಡಿಯೋವನ್ನು ಜುಲೈ 14ರಂದು ಮರಳಿ ಸೋಶಿಯಲ್ ಮಿಡಿಯಾದಲ್ಲಿ ಅಪ್​ಲೋಡ್ ಮಾಡಿದ್ದರು.

ಅದು ದೊಡ್ಡದಾಗಿ ವೈರಲ್ ಆಗಿತ್ತು. ಇಂತವರನ್ನು ಒದ್ದು ಒಳಗೆ ಹಾಕಬೇಕು ಎನ್ನುವ ಆಗ್ರಹಗಳು ಸೊಶೀಯಲ್ ಮಿಡಿಯಾದಲ್ಲಿ ಕೇಳಿ ಬಂದಿದ್ವು. ಅದಕ್ಕೆ ಸ್ಪಂದಿಸಿದ ವಡಾಲದ ರೇಲ್ವೆ ಸಂರಕ್ಷಣಾ ಪಡೆ ಯುವಕನನ್ನು ಪತ್ತೆ ಮಾಡಲು ಶುರು ಮಾಡಿತ್ತು. ಅವನನ್ನು ಹುಡುಕಿಕೊಂಡು ಹೋದ ಕೇಂದ್ರ ಮುಂಬೈನ ಅಂಟಾಪ್ ಹಿಲ್​ಗೆ ಹೋಗಿದ್ದ ಪೊಲೀಸ್ ಪಡೆಗೆ ಶಾಕ್ ಒಂದು ಕಾಯ್ದಿತ್ತು. ಅಂದು ದೊಡ್ಡದಾಗಿ ಓಡುವ ರೈಲಿನಲ್ಲಿ ಸ್ಕೆಟಿಂಗ್ ಸ್ಟಂಟ್ ಮಾಡಿದ್ದ ಫರ್ಹಾತ್ ಅಜಂ ಒಂದು ಕೈ ಒಂದು ಕಾಲನ್ನು ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದ.

ಏಪ್ರಿಲ್ 14ರಂದು ಮಸ್ಜೀದ್ ರೇಲ್ವೆ ಸ್ಟೇಷನ್​ ಬಳಿ ಓಡುವ ರೈಲಿನಲ್ಲಿ ಸ್ಟಂಟ್ ಮಾಡಲು ಹೋಗಿ ಆಯತಪ್ಪಿ ಬಿದ್ದಿದ್ದ ಫರ್ಹಾತ್​, ತನ್ನ ಒಂದು ಕೈ, ಒಂದು ಕಾಲನ್ನು ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದಾನೆ. ಫರ್ಹಾತ್ ಅಜಂನ ಈ ವಿಡಿಯೋವನ್ನು ಸೆಂಟ್ರಲ್ ರೈಲ್ವೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇಂತಹ ಹುಚ್ಚಾಟಗಳನ್ನು ಮೆರೆಯುವ ಮುಂಚೆ ಎಚ್ಚರವಿರಲಿ ಎಂದು ಹೇಳಿದೆ ಅದು ಅಲ್ಲದೇ ಈ ರೀತಿಯ ವಿಡಿಯೋ ಮಾಡುವವರು ಕಂಡು ಬಂದರೆ ಕೂಡಲೇ ರೈಲ್ವೆ ಇಲಾಖೆಯನ್ನು ಸಂಪರ್ಕಿಸುವಂತೆ ನಂಬರ್ ಶೇರ್ ಮಾಡಿದೆ.

— Central Railway (@Central_Railway) July 26, 2024