ಉನ್ನಾವೊ: ಇಲ್ಲೊಬ್ಬ ಶಿಕ್ಷಕ ತಾನು ಎಲ್ಲಿದ್ದೇನೆ, ತನ್ನ ಕತ್ಯವ್ಯವೇನು, ತನ್ನ ವಯಸ್ಸೇನು ಎಂಬುವುದನ್ನೇ ಮರೆತು ಲೇಡಿ ಟೀಚರ್ ಒಬ್ಬರ ಜೊತೆ ಫ್ಲರ್ಟ್ ಮಾಡಿದ್ದಾರೆ.
ಹೌದು. . . ಹಾಜರಾತಿ ಕೊಡಿ ಎಂದು ಕೇಳಲು ಬಂದ ಶಿಕ್ಷಕಿಯ ಜೊತೆಗೆ ಮಾತನಾಡುತ್ತಾ, ಹಾಜರಾತಿ ಬೇಕೆಂದರೆ ನನ್ನ ಕೆನ್ನೆಗೊಂದು ಸಿಹಿ ಮುತ್ತನ್ನು ಕೊಡಬೇಕು ಎಂದು ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ವರ್ತನೆಯ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದ್ದು, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಹ ಶಿಕ್ಷಕಿಯಿಂದ ಮುತ್ತಿಗಾಗಿ ಬೇಡಿಕೆಯಿಟ್ಟಿದ್ದಾರೆ. ಅಟೆಂಡೆನ್ಸ್‌ಗೆ ಪ್ರತಿಯಾಗಿ ಪ್ರಿನ್ಸಿಪಾಲ್ ಮಹಿಳಾ ಶಿಕ್ಷಕಿಯಿಂದ ಕೆನ್ನೆಗೊಂದು ಮುತ್ತು ಕೊಡುವಂತೆ ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ಕೆಲಸವನ್ನು ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಡಿಐಒಎಸ್ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
#यूपी में अटेंडेंस अभी भी चर्चा में है…
सरकार ने डिजिटल अटेंडेंस का फ़रमान तो वापस ले लिया मगर #उन्नाव के सरकारी स्कूल के मास्टर साहब हाज़िरी लगाने के लिए महिला अध्यापक से “पप्पी” की माँग कर रहे हैं। अटेंडेंस लगानी है… पप्पी दो..!!
*मास्टर साहब* :: महिला अध्यापक से मजे ही… pic.twitter.com/vaFtD1VLMs
— Mamta Tripathi (@MamtaTripathi80) August 7, 2024

