ಸುರತ್ಕಲ್:  ಸರಕಾರದ ಆದೇಶ ಮೀರಿ ಶಾಲೆಯ ಆವರಣದಲ್ಲಿ ಸಂಘದ ಚಟುವಟಿಕೆ ನಡೆಸಿರುವ ಘಟನೆ ಸುರತ್ಕಲ್ ಸಮೀಪದಲ್ಲಿರುವ ಮಂಗಳಪೇಟೆಯಲ್ಲಿರುವ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಸರಕಾರಿ ಶಾಲೆಗಳಲ್ಲಿ ಸರಕಾರಿ ಸಂಬಂಧಿತ ಕಾರ್ಯಕ್ರಮಗಳನ್ನು ಮಾತ್ರ ನಡೆಸಬೇಕು, ಸಾರ್ವಜನಿಕ ಕಾರ್ಯಕ್ರಮಗಳಿಗೆ ಶಾಲೆಯ ಆವರಣ ಬಳಕೆ ಮಾಡುವಂತಿಲ್ಲ ಎಂದು
ರಾಜ್ಯ ಸರಕಾರ ಆದೇಶ ಹೊರಡಿಸಿದ್ದು,  ಶಾಲೆಯ ಅವರಣದಲ್ಲಿ ಆರ್ ಎಸ್ ಎಸ್ ಶಾಖೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ಈ ಬಗ್ಗೆ ಶಾಲೆಯಿಂದ ಗ್ರಾಮ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದು, ಶಾಲೆಯಲ್ಲಿ ಪ್ರತಿ ರವಿವಾರ ಸಂಘ ಪರಿವಾರದ ಕಾರ್ಯ ಚಟುವಟಿಕೆ ನಡೆಯುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.