ಪಂಜಾಬ್​: 2002ರಲ್ಲಿ ಸುಖ್​ಪಾಲ್ ಸಿಂಗ್ ಎಂಬ ವ್ಯಕ್ತಿ ಜಪಾನ್ ಮೂಲದ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಬಹು ಬೇಗನೆ ಆಕೆಯ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಎಲ್ಲವೂ ಅಂದುಕೊಂಡಂತೆ ನಡೆಯದ ಹಿನ್ನಲೆ ಸುಖ್​ಪಾಲ್​ ಮತ್ತು ಅವರ ಪತ್ನಿ ಒಪ್ಪಂದದ ಮೇರೆಗೆ ಪರಸ್ಪರ ದೂರವಾದರು. ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ 2 ವರ್ಷದ ಮಗ ತನ್ನ ಹೆತ್ತವರಿಂದ ಅನಾಥನಾಗಿ, ಎಲ್ಲೋ ದೂರದಲ್ಲಿ ಬೆಳೆದು ಇಂದು 19 ವರ್ಷಗಳ ನಂತರ ತನ್ನ ತಂದೆಯನ್ನು ಸೇರಿದ್ದು ಇದೀಗ ನೋಡುಗರ ಕಣ್ಣನ್ನು ಒದ್ದೆ ಮಾಡಿದೆ.

ಮಗ ಮತ್ತು ಪತ್ನಿ ಜತೆ ಸಂಪರ್ಕ ಕಳೆದುಕೊಂಡ ಸುಖ್​ಪಾಲ್​ ಪಂಜಾಬ್​ನ ಅಮೃತ್​ಸರದಲ್ಲಿ ಉಳಿದುಕೊಂಡರು. ಅಂದಿನಿಂದ ಒಂದು ದಿನ ಕೂಡ ಮಗನನ್ನು ತಂದೆ ಕಾಣಲಿಲ್ಲ, ಪುತ್ರ ಅಪ್ಪನನ್ನು ನೋಡಲಿಲ್ಲ. ಜಪಾನ್​ನ​ ಟೋಕಿಯೋದಲ್ಲಿ ಜನಿಸಿದ ರಿನ್ ಟಕಾಹಟಾ, ಜನ್ಮ ಕೊಟ್ಟ ತಂದೆಯ ಮುಖ ನೋಡದೆ ಅವರ ಅನುಪಸ್ಥಿತಿಯಲ್ಲೇ ಬೆಳೆದರು. ಬೆಳೆದು ದೊಡ್ಡವನಾದ ರಿನ್,​ ಈಗಲಾದರೂ ನನ್ನಪ್ಪನ ಮುಖ ನೋಡುವ ಸಮಯ ಬಂದಿದೆ ಎಂದು ದೃಢವಾಗಿ ನಿರ್ಧರಿಸಿ ಭಾರತಕ್ಕೆ ಪ್ರಯಾಣಿಸಿದ್ದು, ಕಡೆಗೂ 19 ವರ್ಷಗಳ ನಂತರ ತಂದೆ ಸುಖ್​ಪಾಲ್​ರನ್ನು ಭೇಟಿಯಾಗಿ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಅಪ್ಪ-ಮಗನ ಭಾವುಕ ಅಪ್ಪುಗೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೋಡುಗರ ಹೃದಯಸ್ಪರ್ಶಿಸಿದೆ.

Sukhpal Singh and his Japanese son Rin Takahata reunited after 19 years when Rin, inspired by a college assignment, traced his father to Amritsar, India. Rin was welcomed warmly by Sukhpal and his current family. pic.twitter.com/KExVBl6wwY

— Akashdeep Thind (@thind_akashdeep) August 24, 2024