ವಿಚಿತ್ರ ಕಳ್ಳತನ ಪ್ರಕರಣ ಘಟನೆಯೊಂದು ನಡೆದಿದ್ದು,  ಕಾಡಿನ ಪೊದೆಯಿಂದ ಮನೆ ಬಳಿ ಬಂದ ಹಾವೊಂದು ಮುಂಭಾಗದಲ್ಲಿಟ್ಟಿದ್ದ ಚಪ್ಪಲಿ ಒಂದನ್ನು ಕಚ್ಚಿಕೊಂಡು ವೇಗವಾಗಿ ಸಾಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದೆ. ತೆವಳಿ ಸಾಗುವ ಹಾವಿಗೆ ಸಾಕಾಗಿದೆ, ಇನ್ನು ಮುಂದೆ ಚಪ್ಪಲಿ ಹಾಕಿಕೊಂಡು ತಿರುಗಾಡಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಪೊದೆ, ಗಿಡಗಂಟಿಗಳಿಂದ ತುಂಬಿಕೊಂಡಿರುವ ಮನೆಯ ಬಳಿ ಹಾವು ಪ್ರತ್ಯಕ್ಷವಾಗಿದೆ. ಹಾವು ನೋಡಿ ಜನ ಭಯಗೊಂಡಿದ್ದಾರೆ. ಓಡಿಸುವ ಪ್ರಯತ್ನ ಮಾಡಿದ್ದಾರೆ. ಇತ್ತ ಹಾವು ಕೂಡ ಗಾಬರಿಯಾಗಿದೆ. ಒಂದೇ ಸಮನೆ ಓಡಿ ಹೋಗಲು ಯತ್ನಿಸಿದೆ. ಆದರೆ ಅದಕ್ಕೂ ಮುನ್ನ ಹಾವು ಮನೆಯ ಮುಂಭಾಗದಲ್ಲಿಟ್ಟಿದ್ದ ಚಪ್ಪಲಿ ಕಚ್ಚಿಕೊಂಡು ಸಾಗಿದೆ. ಚಪ್ಪಲಿಯನ್ನು ಎತ್ತಿ ಹಿಡಿದು ಸಾಗಿದ ದೃಶ್ಯ ಕಾರ್ಟೂನ್‌ನಂತೆ ಕಾಣುಸಿತಿದ್ದು ಗಮನ ಸೆಳೆದಿದೆ.

ಹಾವು ಸಾಗುತ್ತಿದ್ದಂತೆ ಭಯಭೀತಗೊಂಡಿದ್ದ ಮನೆಯ ಜನ ಕೂಡ ನಕ್ಕಿದ್ದಾರೆ. ಚಪ್ಪಲಿ ಕದ್ದೊಯ್ಯುತ್ತಿದೆ ಎಂದು ಕೂಗಿದ್ದಾರೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಇಷ್ಟು ದಿನ ತೆವಳಿಕೊಂಡು ಸಾಗುತ್ತಿದ್ದ ಹಾವು ತನ್ನ ಶೈಲಿ ಬದಲಿಸುತ್ತಿದೆ. ಇನ್ನು ಹಾವು ಚಪ್ಪಲಿ ಹಾಕಿಕೊಂಡು ಸಾಗಲಿದೆ ಎಂದಿದ್ದಾರೆ. ಚಪ್ಪಲಿ ಕದ್ದೊಯ್ದಿಲ್ಲ, ಅದರ ಅಲ್ಲಿಗೆ ಚಪ್ಪಲಿ ಸಿಲುಕಿಕೊಂಡಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾವು ಕೂಡ ಆಧುನಿಕ ಬದುಕಿಗೆ ಒಗ್ಗಿಕೊಂಡಿದೆ. ಹೀಗಾಗಿ ಚಪ್ಪಲಿ ಅನಿವಾರ್ಯ ಎಂದಿದ್ದಾರೆ.  ಇನ್ನು ಉರಗ ತಜ್ಞರರೊಬ್ಬರು ಅದು ಆಹಾರ ಎಂದುಕೊಂಡು ಕೊಂಡೊಯ್ದಿದೆ ಇದು ಅದರ ಅರೋಗ್ಯಕ್ಕೆ ಅಪಾಯವಾಗಿದೆ. ಇದರಿಂದ ಅದು ಸಾವಿಗೀಡಾಗಬಹುದು ಎಂದಿದ್ದಾರೆ.

— Dinesh Kumar (@DineshKumarLive) August 11, 2024