ಪಾಟ್ನಾ: ವಿಮಾನ ನಿಲ್ದಾಣದ ರನ್ ವೇ ನಲ್ಲಿಯೇ ಬದ್ಧ ವೈರಿಗಳಾದ ಹಾವು ಮತ್ತು ಮುಂಗುಸಿಗಳು ಕಾದಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಹಾವು ಮತ್ತು ಮುಂಗುಸಿ ಜೈವಿಕವಾಗಿ ಬದ್ಧವೈರಿಗಳು.. ಇವುಗಳ ಕದನ ಮನುಷ್ಯಕ ಕಣ್ಣಿಗೆ ಕಾಣಸಿಗುವುದು ಅಪರೂಪ. ಆದರೆ ಬಿಹಾರ ರಾಜಧಾನಿ ಪಾಟ್ನಾದ ವಿಮಾನ ನಿಲ್ದಾಣದ ರನ್ ವೇ ಮೇಲೆಯೇ ಇಂತಹ ಅಪರೂಪದ ದೃಶ್ಯ ಕಂಡಿದೆ. ಹೌದು.. ಒಂದು ನಾಗರಹಾವಿನೊಂದಿಗೆ ಮೂರು ಮುಂಗುಸಿಗಳು ಕಾದಾಡಿರುವ ಅಪರೂಪದ ವಿಡಿಯೋವನ್ನು ಪಾಟ್ನಾ ವಿಮಾನ ನಿಲ್ದಾಣದ ಸಿಬ್ಬಂದಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಆರಂಭದಲ್ಲಿ ನಾಗರ ಹಾವು ರನ್ ವೇ ಮೇಲೆ ಬಂದಿದ್ದು, ಕೆಲ ಹೊತ್ತು ಹಾವು ತನ್ನ ಮಾರ್ಗದಲ್ಲಿ ಸಾಗಿತ್ತು. ಆದರೆ ಇದನ್ನು ಕಂಡ ಮುಂಗುಸಿಯೊಂದು ಮೊದಲು ಹಾವಿನ ಮೇಲೆರಗಿದೆ. ಕೂಡಲೇ ಮತ್ತೆ ಎರಡು ಮುಂಗುಸಿಗಳು ಅದರೊಟ್ಟಿಗೆ ಸೇರಿ ಹಾವಿನ ಮೇಲೆ ದಾಳಿ ಮಾಡಿವೆ.
ಮೂರು ಮುಂಗುಸಿಗಳನ್ನು ಏಕಕಾಲದಲ್ಲಿ ಎದುರಿಸಿದ ಹಾವು ತನ್ನ ಹೆಡೆ ಬಿಚ್ಚಿ ತನ್ನನ್ನು ತಾನು ಕಾಪಾಡಿಕೊಳ್ಳಲು ಹರಸಾಹಸಪಟ್ಟಿದೆ. ಇವಿಷ್ಟೂ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
बिहार के राजनिति के तरह पटना एयरपोर्ट पर सांप और नेवला का खेल जारी है।।। pic.twitter.com/AeQjZVcAjY
— हमारा समाज (@HamaraSamajj) August 11, 2024

