ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿದ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಈ ಪ್ರಕರಣದ ಕುರಿತು ಬೇಜವಾಬ್ದಾರಿ ತೋರಿದ ಇಲ್ಲಿನ ಸರ್ಕಾರದ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ಕಾರ್ಯಕರ್ತೆಯೊಬ್ಬರು ಮಾತನಾಡಿದ್ದು, ನಿಮ್ಮ ಕಾಮ ತೃಷೆ ತೀರಿಸಲು ನಮ್ಮ ಬಳಿ ಬನ್ನಿ ಆದ್ರೆ ದಯವಿಟ್ಟು ಅಮಾಯಕ ಹೆಣ್ಣುಮಕ್ಕಳ ಜೀವ, ಜೀವನ ಹಾಳು ಮಾಡಬೇಡಿ ಎಂದು ಕಾಮುಕ ವ್ಯಕ್ತಿಗಳಿಗೆ ಉತ್ತಮ ಸಂದೇಶವನ್ನು ಕೊಟ್ಟಿದ್ದಾರೆ. ಇವರ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇವರ ಈ ಮಾತುಗಳು ಕೋಟ್ಯಾಂತರ ಜನರ ಹೃದಯ ಗೆದ್ದಿದೆ.

ವೈರಲ್ ವಿಡಿಯೋದಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರು ನಿಮಗೆ ಹೆಣ್ಣಿನ ಮೇಲೆ ಅಷ್ಟೊಂದು ಕಾಮವಿದ್ದರೆ ನಮ್ಮ ಬಳಿಗೆ ಬನ್ನಿ, ದಯವಿಟ್ಟು ಅಮಾಯಕ ಹೆಣ್ಣಿನ ಬದುಕನ್ನು ಹಾಳು ಮಾಡಬೇಡಿ ಎಂಬ ಉತ್ತಮ ಸಂದೇಶ ಕೊಡುವ ದೃಶ್ಯವನ್ನು ಕಾಣಬಹುದು. ಕೊಲ್ಕತ್ತಾ ರೇಪ್ ಕೇಸ್ ಬಗ್ಗೆ ರಿಪೋರ್ಟರ್ ಒಬ್ಬರ ಬಳಿ ಮಾತನಾಡುವಾಗ ಲೈಂಗಿಕ ಕಾರ್ಯಕರ್ತೆಯೊಬ್ಬರು ನಿಮ್ಮ ಕಾಮ ತೃಷೆಯನ್ನು ನಮ್ಮಂಥವರ ಬಳಿಗೆ ಬನ್ನಿ ಆದ್ರೆ ದಯವಿಟ್ಟು ಅಮಾಯಕ ಹೆಣ್ಣುಮಕ್ಕಳನ್ನು ಅತ್ಯಾಚಾರದ ಮೂಲಕ ಅವರ ಜೀವ, ಜೀವನವನ್ನು ಹಾಳು ಮಾಡಬೇಡಿ ಎಂದು ಹೇಳಿದ್ದಾರೆ.

— Lamist ( he/tler ) (@lamist17) August 21, 2024