ನಾಗ್ಪುರ: ಕಾರಿನಲ್ಲಿ ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಡ್ರೈವಿಂಗ್ ಮಾಡುತ್ತಾ, ಯುವತಿಗೆ ಕಿಸ್ ಮಾಡಿ, ರೊಮ್ಯಾನ್ಸ್ ಮಾಡುತ್ತಾ ಸಾಗಿದ ವಿಡಿಯೋ ವೈರಲ್ ಆಗಿದೆ. ನಾಗ್ಪುರದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿರುವ ಘಟನೆ ನಡೆದಿದೆ.
ನಾಗ್ಪುರದ ಲಾ ಕಾಲಜ್ ಸ್ಕ್ವೇರ್‌ನಿಂದ ಶಂಕರ್ ನಗರಕ್ಕೆ ತೆರಳುತ್ತಿದ್ದ ಭಾರಿ ಸಂಚಾರ ದಟ್ಟಣೆ ರಸ್ತೆಯಲ್ಲಿ ಈ ರೊಮ್ಯಾನ್ಸ್ ನಡೆದಿದೆ. ಯುವಕ ಹಾಗೂ ಯುವತಿ ಇಬ್ಬರು 28 ವಯಸ್ಸಿನವರಾಗಿದ್ದಾರೆ. ಐ10 ಕಾರಿನಲ್ಲಿ ಈ ಜೋಡಿ ರೊಮ್ಯಾನ್ಸ್ ಮಾಡಿದ್ದಾರೆ. ಅದು ಕೂಡ ಟ್ರಾಫಿಕ್ ತುಂಬಿದ ರಸ್ತೆಯಲ್ಲಿ ಸಾಗುತ್ತಲೇ ಇವರ ರೊಮ್ಯಾನ್ಸ್ ಜೋರಾಗಿದೆ.
ಕಾರಿ ಡ್ರೈವಿಂಗ್ ಸೀಟಿನಲ್ಲಿ ಕುಳಿತ ಯುವಕ, ಗೆಳತಿಯನ್ನು ತನ್ನ ತೊಡೆ ಮೇಲೆ ಕೂರಿಸಿಕೊಂಡಿದ್ದಾನೆ. ಬಳಿಕ ಯುವತಿಯನ್ನು ಚುಂಬಿಸುತ್ತಾ, ರೊಮ್ಯಾನ್ಸ್ ಮಾಡುತ್ತಾ ಸಾಗಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಬಳಿಕ ನಾಗ್ಪುರ ಪೊಲೀಸರು ಕ್ರಮಕ್ಕೆ ಆಗ್ರಹಿಸಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಗ್ಪುರದ ಅಂಬಜಾರಿ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರನ್ನು ಗೆಳೆಯನ ಮನೆಯಲ್ಲಿ ಪಾರ್ಕ್ ಮಾಡಿ ಇಬ್ಬರು ಪರಾರಿಯಾಗಲು ನಿರ್ಧರಿಸಿದ್ದಾರೆ. ಆದರೆ ಅಷ್ಟರಲ್ಲೇ ಪೊಲೀಸರು ಯುವಕನ ಬಂಧಿಸಿದ್ದಾರೆ. ಬಳಿಕ ಯುವತಿಯನ್ನೂ ವಶಕ್ಕೆ ಪಡೆದಿದ್ದಾರೆ.

