ಬೆಂಗಳೂರು: ಮೈಮೇಲೆ ಕೆಜಿಗಟ್ಟಲೇ ಚಿನ್ನ, ಕೈಯಲ್ಲಿ ಎಕೆ 47, ಹಿಂದೆ-ಮುಂದೆ ಬಾಡಿಗಾರ್ಡ್ಸ್‌ ಇಟ್ಟುಕೊಂಡು ಸುಂದರಿಯರ ನಡುವೆ ರೀಲ್ಸ್‌ ಶೋಕಿ ಮಾಡುತ್ತಿದ್ದವ ಜೈಲು ಸೇರಿರುವ ಘಟನೆ ನಡೆದಿದೆ.

ಈ ವ್ತಕ್ತಿಯ ಹೆಸರು ಅರುಣ್ ಕಟಾರೆ ಎಂದು. ಬೀದಿಬೀದಿಯಲ್ಲಿ ಗನ್‌ ತೋರಿಸಿಕೊಂಡು ರೀಲ್ಸ್​​ಗಾಗಿ ಶೋಕಿ ಮಾಡಿದವನನ್ನು ಇದೀಗ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಅರುಣ್ ಕಟಾರೆ ಮೈಮೇಲೆ ಕೆಜಿಗಟ್ಟಲೇ ಚಿನ್ನ ಗಾಕಿಕೊಂಡು, ಬಾಡಿಗಾರ್ಡ್ಸ್‌ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್‌ ಮಾಡುತ್ತಿದ್ದನು.

ಈತನ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಕೊತ್ತನೂರು ಪೊಲೀಸರು, ಆರ್ಮ್ಸ್ ಆಕ್ಟ್, IPC ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.