ಹೈದರಾಬಾದ್: ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹವಾ ಜಾಸ್ತಿಯಾಗಿದೆ. ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಚಲಿಸುತ್ತಿದ್ದ ಬಸ್ ಕೆಳಗೆ ಹಠಾತ್ತನೆ ಮಲಗುವ ಸಾಹಸ ರೀಲ್ಸ್ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಈ ಕುರಿತ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹುತೇಕ ವಾಹನಗಳು ಸಂಚರಿಸುವ ಸಮಯದಲ್ಲಿ ಯುವಕನೊಬ್ಬ ದಿಢೀರನೆ ರಸ್ತೆ ಮಧ್ಯಕ್ಕೆ ಬಂದು ನಿಂತಿದ್ದಾನೆ. ನಂತರ ಒಂದೆರಡು ಹೆಜ್ಜೆ ಮುಂದಕ್ಕೆ ಸಾಗಿ ಚಲಿಸುತ್ತಿದ್ದ ಬಸ್ ಕೆಳಗೆ ಮಲಗಿದ್ದಾನೆ.
ಬಸ್ ಸಹ ತಕ್ಷಣಕ್ಕೆ ನಿಲ್ಲಿಸಲಾಗದೇ ಮುಂದೆ ಸಾಗಿದೆ. ಏನೋ ಅನಾಹುತ ಸಂಭವಿಸಿತೇನೋ ಎನ್ನುವಷ್ಟರಲ್ಲಿ ಯುವಕ ಎದ್ದು ರಸ್ತೆ ಪಕ್ಕಕ್ಕೆ ತೆರಳಿದ್ದಾರೆ. ಆನೇರಿ ಶಾ ಯಕ್ಕತಿ ಎಂಬ ಎಕ್ಸ್ ಖಾತೆಯಲ್ಲಿ ಜೂನ್ 21 ರಂದು ವೀಡಿಯೋ ಹಂಚಿಕೊಳ್ಳಲಾಗಿದ್ದು, 78 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಯುವಜನ ಹುಚ್ಚಾಟಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಂಥವನನ್ನ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿ ಎಂದು ಕಿಡಿ ಕಾರಿದ್ದಾರೆ.

