ಮುಂಬೈ: ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆದಿದೆ.
ಮೂರು ದಿನದ ಅದ್ಧೂರಿ ಮದುವೆಯಲ್ಲಿ ಜಾಗತಿಕ ನಾಯಕರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಭಾಗವಹಿಸಿದ್ದರು.
ವಿಶೇಷ ಅಂದ್ರೆ ಮೈಸೂರು ಕೆಫೆಯ ಮಾಲೀಕರಾದ ನರೇಶ್ ನಾಯಕ್ ಅವರ ತಾಯಿ ಶಾಂತೇರಿ ನಾಯಕ್ ಉಪಸ್ಥಿತರಿದ್ದರು. ಮಗ ನರೇಶ್ ಗೆ ಕೆಫೆಯನ್ನು ಹಸ್ತಾಂತರಿಸುವ ಮೊದಲು ಶಾಂತೇರಿ ನಾಯಕ್ ಅದರ ಮುಖ್ಯಸ್ಥರಾಗಿದ್ದರು. ಇಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಮದುವೆಯಲ್ಲಿ ಮೈಸೂರು ಕೆಫೆಯ ಶಾಂತೇರಿ ನಾಯಕ್ ಅವರನ್ನು ಅನಂತ್ ಗುರುತಿಸಿ ಪತ್ನಿ ರಾಧಿಕಾಳನ್ನು ಬಹಳ ಉತ್ಸಾಹದಿಂದ ಕರೆದು ಮೈಸೂರು ಕೆಫೆ ಓನರ್ ಎಂದು ಪರಿಚಯಿಸಿರುವುದು ಮಾತ್ರವಲ್ಲ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಹಾಗೇ ಪ್ರತಿ ಭಾನುವಾರ, ನಾವು ನಿಮ್ಮ ಆಹಾರವನ್ನು ನಮ್ಮ ಮನೆಯಲ್ಲಿ ಮಿಸ್ ಮಾಡದೆ ತಿನ್ನುತ್ತೇವೆ ಎಂದು ಧನ್ಯವಾದ ಹೇಳುವುದು ಕೂಡ ಕಾಣಿಸಿದೆ. ನವವಿವಾಹಿತ ಜೋಡಿಗಳ ಜೊತೆಗೆ ಶೋಕ್ಲಾ ಮೆಹ್ತಾ, ಅನಂದ್ ಪಿರಾಮಳ್ ಕೂಡ ಇದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದು, ಮೈಸೂರು ಕೆಫೆಯ ಹಿರಿಯ ಮಹಿಳೆಯ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದಾರೆ. ಎಂತಹ ಸಂಸ್ಕಾರ ಅದ್ಭುತವಾಗಿದೆ. ಅಂಬಾನಿ ಕುಟುಂಬ ಡೌನ್ ಟು ಅರ್ಥ್ ಎಂದು ಕಮೆಂಟ್ ಮಾಡಿದ್ದಾರೆ.
The elderly lady here is Mrs.Shanteri Nayak,owner of Cafe Mysore,a very popular South Indian eatery in Matunga,Mumbai.
Mukesh Ambani has been going there since his college days nd his kids have grown up eating from there,it’s a weekly ritual in their house on Sundays.
They didn’t… pic.twitter.com/FVNshgz1Vg
— Lotus 🪷🇮🇳 (@LotusBharat) July 16, 2024

