ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿಯವರು ವೃದ್ಧೆಯೊಬ್ಬರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬುಧವಾರ ಪ್ರಧಾನಿಯವರು ಚುನಾವಣಾ ರ‍್ಯಾಲಿ ನಡೆಸಲು ಒಡಿಶಾದ ಕೇಂದ್ರಪಾರಕ್ಕೆ ತೆರಳಿದ್ದರು. ಅಂತೆಯೇ ರ‍್ಯಾಲಿ ಬಳಿಕ ವೇದಿಕೆಯಲ್ಲಿ ವೃದ್ಧೆಯೊಬ್ಬರ ಕಾಲಿಗೆ ನಮಸ್ಕರಿಸಿದ್ದಾರೆ.
ವೀಡಿಯೋ ವೈರಲ್ ಬೆನ್ನಲ್ಲೇ ಆ ವೃದ್ಧೆ ಯಾರು ಎಂಬ ಪ್ರಶ್ನೆ ಮೂಡಿದ್ದು ಕಳೆದ ಫೆಬ್ರವರಿ 26 ರಂದು 98 ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮೋದಿಯವರು ಅವರ ಹೆಸರನ್ನು ಪ್ರಸ್ತಾಪಿಸಿದ್ದರು.
ಈ ವೃದ್ಧೆಯ ಹೆಸರು ಕಮಲಾ ಮಹಾರಾಣಾ. ಒಡಿಶಾ ಮೂಲದ ಇವರು ತ್ಯಾಜ್ಯ ವಸ್ತುಗಳನ್ನು ಬಳಸಿ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಇವರನ್ನು ಗುರುತಿಸಿ, ಕೆಲಸವನ್ನು ಕೊಂಡಾಡಿದ್ದರು.
ರ‍್ಯಾಲಿ ಬಳಿಕ ವೇದಿಕೆಯಲ್ಲಿ ಕಮಲಾ ಮಹಾರಾಣಾ ಅವರು ಮೋದಿಯವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಮಂಡಿಯೂರಿ ಕಮಲಾ ಕಾಲಿಗೆ ನಮಸ್ಕರಿಸಿದ್ದಾರೆ.
In today’s #MannKiBaat, Prime Minister Shri @narendramodi told the nation how a sister named Kamala Maharana of Kendrapara district has saved the environment by using unused plastic and created employment for herself and many women. pic.twitter.com/dfD71EV5il
— Pratik Samal (@psamal347) February 26, 2023

