ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಜೆಂಪಿಗ್‌ ಮಾಡುವ ಈ ಸಮಯದಲ್ಲಿ ವ್ಯಕ್ತಿಯೋರ್ವ 84 ವರ್ಷ ಒಂದೇ ಕಂಪೆನಿಯಲ್ಲಿ ದುಡಿದು ಗಿನ್ನಿಸ್‌ ದಾಖಲೆ ಬರೆದಿದ್ದಾರೆ. ಈ ವ್ಯಕ್ತಿಯ ಹೆಸರು ವಾಲ್ಟರ್ ಆರ್ಥಮನ್. ಬ್ರೆಜಿಲ್‌ನ ಸಣ್ಣ ಪಟ್ಟಣವಾದ ಬ್ರಸ್ಕ್‌ನಲ್ಲಿ ಜನಿಸಿದ ಇವರು ಬಡತನದಿಂದಾಗಿ ಚಿಕ್ಕ ವಯಸ್ಸಿನಲ್ಲೇ ಶಿಕ್ಷಣ ತೊರೆದು ಕೆಲಸಕ್ಕೆ ಸೇರಿಕೊಂಡಿದ್ದರು. 15 ವರ್ಷ ವಯಸ್ಸಿನವರಾಗಿದ್ದಾಗ ಕಂಪನಿಯಲ್ಲಿ ಶಿಪ್ಪಿಂಗ್ ಸಹಾಯಕರಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು.

ಜರ್ಮನ್ ಭಾಷೆಯಲ್ಲಿ ಅವರ ಉತ್ತಮ ಕೌಶಲ್ಯದಿಂದಾಗಿ ಅವರನ್ನು ಇಂಡಸ್ಟ್ರಿಯಾಸ್ ರೆನಾಕ್ಸ್ ಎಸ್‌ಎಯಲ್ಲಿ ನೇಮಿಸಲಾಯಿತು. ಕಂಪನಿಯಲ್ಲಿ ಅವರ ಉದ್ಯೋಗ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ಅವರು ಮಾರಾಟ ವ್ಯವಸ್ಥಾಪಕರಾಗಿ ಬಡ್ತಿ ಪಡೆದರು. ಈ ಮೂಲಕ ಸುಮಾರು 84 ವರ್ಷಗಳಿಂದ ಒಂದೇ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ.

ಕಳೆದ ಏಪ್ರಿಲ್ 19ರ 2022ರಂದು, ವಾಲ್ಟರ್ ಆರ್ಥಮನ್ 100 ವರ್ಷಗಳನ್ನು ಪೂರೈಸಿದರು. ಅವರು ತಮ್ಮ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ತಮ್ಮ ಶತಮಾನೋತ್ಸವವನ್ನು ಆಚರಿಸಿದರು.