ಮುಂಬೈ: ಪಂಜುರ್ಲಿ ದೈವದ ಅವತಾರವುಳ್ಳ ಗಣೇಶನ ವಿಗ್ರಹವೊಂದರ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನಲ್ಲಿ ಗಣೇಶ ಚತುರ್ಥಿ ನಿಮಿತ್ತ ತಯಾರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕೋಪರ್ಖೈರನೆನಲ್ಲಿ ಈ ಗಣೇಶ ವಿಗ್ರಹವನ್ನು ಸಿದ್ಧಪಡಿಸಲಾಗಿದ್ದು, ವಿನಾಯಕ ಪಗಾರೆ ಅರ್ಟ್ ವರ್ಕ್ ಈ ವಿಡಿಯೋವನ್ನು ಹಂಚಿಕೊಂಡಿದೆ.
ಕಾಂತಾರ ಸಿನಿಮಾದಲ್ಲಿನ ಪಂಜುರ್ಲಿ ದೈವ ಲುಕ್‌ಗೆ ಗಣೇಶನ ಸೊಂಡಿಲು ಕೂರಿಸಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದನ್ನು ಗಮನಿಸಿರುವ ಕರಾವಳಿಯಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈವಕ್ಕೆ ಮಾಡುತ್ತಿರುವ ಅವಮಾನ ಎಂದು ಕಿಡಿಕಾರಿದ್ದಾರೆ.

