ಲಕ್ನೊ: ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ವಿಚಿತ್ರ ಕೇಸ್ ಒಂದು ಪತ್ತೆಯಾಗಿದೆ. ಹರ್ನಿಯಾ ಅಂತ ಬಂದ ಪುರುಷನಲ್ಲಿ ಕಂಡಿದ್ದು ಮಹಿಳೆಯರ ಗರ್ಭಾಶಯ ಮತ್ತು ಅಮಡಾಶಯ ಪತ್ತೆಯಾಗಿದ್ದು ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸ್ಕ್ಯಾನಿಂಗ್ ಮಾಡಿಸಿದಾಗ ಹರ್ನಿಯಾ ಸಮಸ್ಯೆ ಇರೋದು ಗೊತ್ತಾಗಿತ್ತು. ಹಾಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಉತ್ತರಪ್ರದೇಶದ ಗೊರಖ್‌ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಈ ವ್ಯಕ್ತಿಯನ್ನು 42 ವರ್ಷದ ರಾಜ್ಗಿರ್ ಮಿಶ್ರಾ ಎಂದು ಗುರುತಿಸಲಾಗಿದೆ. ಎರಡು ಮಕ್ಕಳ ತಂದೆಯಾಗಿರುವ ರಾಜ್ಗಿರ ಅವರಲ್ಲಿ ಮಹಿಳೆಯ ಭಾಗಗಳನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ.
ಹರ್ನಿಯಾ ಸಮಸ್ಯೆ ಎಂದು ಹೆಚ್ಚಿನ ಚಿಕಿತ್ಸೆಗಾಗಿ ಮಿಶ್ರಾ ಅವರು ಉಚಿತ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ತೆರಳಿದ್ದರು. ಈ ಶಿಬಿರಾ ಕೇಂದ್ರದ ವೈದ್ಯರಾದ ಡಾ.ನರೇಂದ್ರ ದೇವ್, ಅಲ್ಟ್ರಾ ಸೌಂಡ್‌ನಲ್ಲಿ ಹರ್ನಿಯಾ ಎಂದು ದಾಖಲಾಗಿತ್ತು. ಹಾಗಾಗಿ ಸರ್ಜರಿ ನಡೆಸಲು ಅನುಮತಿ ನೀಡಲಾಯ್ತು. ಶಸ್ತ್ರಚಿಕಿತ್ಸೆ ವೇಳೆ ಕಿಬ್ಬೊಟ್ಟೆಯ ಕೆಳಭಾಗದಲ್ಲಿರುವ ಮಾಂಸದ ತುಂಡು ಅದು ಬೆಳವಣಿಗೆಯಾದ ಗರ್ಭಾಶಯ ಮತ್ತು ಅಂಡಾಶಯ ಕಾಣಿಸಿತು ಎಂದು ಡಾ.ನರೇಂದ್ರ ದೇವ್ ಹೇಳಿದ್ದಾರೆ.
ಇನ್ನೂ ಶಸ್ತ್ರಚಿಕಿತ್ಸೆ ಬಳಿಕ ರಾಜ್ಗಿರ್ ಮಿಶ್ರಾ ಆರೋಗ್ಯವಾಗಿದ್ದಾರೆ. ಮಹಿಳೆಯರ ದೇಹದಲ್ಲಿರುವ ಭಾಗಗಳಿದ್ರೂ ರಾಜ್‌ಗಿರ್ ಮಿಶ್ರಾ ಅವರಲ್ಲಿ ಯಾವುದೇ ಹೆಣ್ಣಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಡಾ.ನರೇಂದ್ರ ದೇವ್ ಸ್ಪಷ್ಟಪಡಿಸಿದ್ದಾರೆ.

