ಧಾರವಾಡ:  ಈಗಂತು ದಿನಕ್ಕೊಂದು ವಿಚಿತ್ರ ಘಟನೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಅಂತಹ ಘಟನೆಗಳ ವಿಡಿಯೋಗಳು ಹೆಚ್ಚು ವೈರಲ್‌ ಆಗುತ್ತ ಇರುತ್ತವೆ.   ವರುಣ ಭಾರಿ ಆರ್ಭಟದ ಮಧ್ಯೆಯೇ ನಗರದ ಸಿಬಿಟಿಯಲ್ಲಿ ವ್ಯಕ್ತಿಯೊಬ್ಬ ಜಪ ಮಾಡಲು ಕುಳಿತ ಪ್ರಸಂಗ ನಡೆದಿದ್ದು, ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ.

ಈ ಮಳೆ ಮಧ್ಯೆಯೇ ವ್ಯಕ್ತಿಯೊಬ್ಬ ಧಾರವಾಡದ ಸಿಬಿಟಿಯಲ್ಲಿ ಜಪ ಮಾಡಲು ಕುಳಿತಿದ್ದಾನೆ. ಆತ ಮದ್ಯವ್ಯಸನಿಯೋ ಅಥವಾ ಮಾನಸಿಕ ಅಸ್ವಸ್ಥನೋ ಗೊತ್ತಿಲ್ಲ. ಮಳೆಯ ಮಧ್ಯೆಯೇ ಆತ ಜಪಕ್ಕೆ ಕುಳಿತಿದ್ದ ವೀಡಿಯೋವನ್ನು ಸಿಬಿಟಿಯಲ್ಲಿ ನಿಂತಿದ್ದ ಜನ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.