ನವದೆಹಲಿ: ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಬಿಗ್‌ಬಾಸ್ಕೆಟ್‌ನ ಗ್ರಾಹಕರೊಬ್ಬರು ಇತ್ತೀಚೆಗೆ ಸ್ಯಾನಿಟರಿ ನ್ಯಾಪ್‌ಕಿನ್‌ನೊಂದಿಗೆ ಐಸ್‌ಕ್ರೀಂ ಕಾಂಬೋ ಆಫರ್‌ ಕಂಡು ಅಚ್ಚರಿಗೊಳಗಾಗಿದ್ದು ಮತ್ರವಲ್ಲದೇ ಈ ವಿಶಿಷ್ಟ ಕೊಡುಗೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಬಿಗ್‌ಬಾಸ್ಕೆಟ್‌ ಕಂಪನಿ ಕ್ಷಮೆ ಕೇಳಿದೆ.

ಅಮೃತಾ ಮುರುಗೇಶನ್ ಎಂಬ ಬಿಗ್‌ಬಾಸ್ಕೆಟ್‌ ಬಳಕೆದಾರರು ಸ್ಯಾನಿಟರಿ ನ್ಯಾಪ್‌ಕಿನ್‌ ಹಾಗೂ ಐಸ್‌ಕ್ರೀಮ್‌ ಕಾಂಬೋ ಪ್ಯಾಕ್‌ ಅನ್ನು ಹೈಲೈಟ್‌ ಮಾಡಿದ ಸ್ಕ್ರೀನ್‌ ಶಾಟ್‌ ಅನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಹಂಚಿಕೊಂಡು, ಬಿಗ್‌ಬಾಸ್ಕೆಟ್‌ನ ಮಹಿಳೆಯರ ಅಗತ್ಯತೆಗಳನ್ನು ಪೂರೈಸುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಬಳಕೆಯಾಗುವುದೇನೋ ನಿಜ. ಇದೇ ಸಂದರ್ಭ ಬಿಗ್‌ ಬಾಸ್ಕೆಟ್‌ ಮಹಿಳೆಯರ ಆಸೆ, ಅಗತ್ಯತೆಗಳನ್ನೂ ಪೂರೈಸಲು ಪ್ರಯತ್ನ ಪಡುತ್ತಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಆದರೆ ಶ್ಲಾಘನೆಯ ಹೊರತಾಗಿಯೂ ಬಿಗ್‌ಬಾಸ್ಕೆಟ್‌ನ ಸ್ವಯಂಚಾಲಿತ ವ್ಯವಸ್ಥೆಯು ಇದನ್ನು ತಪ್ಪಾಗಿ ಗ್ರಹಿಸಿ ಬಳಕೆದಾರರಿಗೆ ಕ್ಷಮೆ ಕೇಳಿದೆ.

https://x.com/ewyuckugh/status/1843621431269085365?