ಮುಂಬೈ: ಮುಸ್ಲಿಂ ಪ್ರಯಾಣಿಕರು ರೈಲಿನಲ್ಲಿ ನಮಾಜ್ ಮಾಡುತ್ತಿದ್ದ ವೇಳೆ ಪ್ರಯಾಣಿಕರಿಗೆ ನಡೆದಾಡಲು ಅಡ್ಡಿಯುಂಟಾದ ಕಾರಣ ಮುಸ್ಲಿಂ ಪ್ರಯಾಣಿಕರನ್ನು ಟಿಟಿಇ ತರಾಟೆ ತೆಗೆದುಕೊಂಡ ಘಟನೆ ನಡೆದಿದ್ದು, ಈ ವಿಡಿಯೋವನ್ನು ಎಲ್ಲೆಡೆ ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ, ರೈಲ್ವೆ ಟಿಟಿಇ ಬೋಗಿಯಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ಮುಂದಾದ ಮುಸ್ಲಿಂ ಪ್ರಯಾಣಿಕರನ್ನು ಬೈಯುತ್ತಿರುವುದನ್ನು ಗಮನಿಸಬಹುದು. ರೈಲಿನಲ್ಲಿದ್ದ ಮುಸ್ಲಿಂ ಸಮುದಾಯದವರು ಬೋಗಿಯ ಮಧ್ಯದಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಅದಕ್ಕಾಗಿ ಕುಳಿತುಕೊಳ್ಳಲು ಅವರು ದಾರಿಯಲ್ಲಿ ಪ್ಲಾಸ್ಟಿಕ್ ಅನ್ನು ಹಾಸುತ್ತಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ಟಿಟಿಇ ಕೋಪಗೊಂಡು ಅವರಿಗೆ ತಮ್ಮ ಕುಳಿತುಕೊಳ್ಳುವ ಸೀಟಿನಲ್ಲಿ ನಮಾಜ್ ಮಾಡುವಂತೆ ಮತ್ತು ದಾರಿಯಿಂದ ಎದ್ದೇಳುವಂತೆ ತಿಳಿಸಿದ್ದಾರೆ. ಇದು ವಿಡಿಯೋದಲ್ಲಿ ಕಂಡು ಬಂದಿದೆ.