ನಾಗ್ಪುರ: ನಾಗ್ಪುರದ ಲಕ್ಷ್ಮೀನಗರ ಪ್ರದೇಶದ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುತ್ತಿರುವ ದಂಪತಿಗಳ ವಿಡಿಯೋ ವೈರಲ್ ಆಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜನನಿಬಿಡ ಪ್ರದೇಶವಾದ ಲಕ್ಷ್ಮೀನಗರ ಚೌಕದ ಬಳಿ ಈ ಘಟನೆ ನಡೆದಿದ್ದು, ಬೈಕ್ನಲ್ಲಿ ಬಂದ ಸ್ಥಳೀಯ ಯುವಕರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಈ ದಂಪತಿಗಳ ನಡುವೆ ವಾಗ್ವಾದದ ನಂತರ, ಮೊದಲು ಆ ವ್ಯಕ್ತಿ ಕಾರಿನಿಂದ ಹೊರಬಂದು ರಸ್ತೆಯಲ್ಲಿ ಬೆತ್ತಲೆಯಾಗಿ ನಡೆಯಲು ಪ್ರಾರಂಭಿಸಿದನು. ನಂತರ ಯುವತಿ ಕೂಡ ಅವನ ಹಿಂದೆ ನಗ್ನ ಸ್ಥಿತಿಯಲ್ಲಿ ರಸ್ತೆಯಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಅವಳು ಅವನಲ್ಲಿ ಕ್ಷಮೆಯಾಚಿಸಿ ಅವನನ್ನು ಕಾರಿನಲ್ಲಿ ಕುಳಿತುಕೊಳ್ಳಲು ಹೇಳುತ್ತಿದ್ದಳು. ಆದರೆ, ಆ ಯುವಕ ಕಾರಿನಲ್ಲಿ ಕುಳಿತುಕೊಳ್ಳಲು ಸಿದ್ಧನಿರಲಿಲ್ಲ. ಹೀಗಾಗಿ ಯುವತಿ ಪದೇ ಪದೇ ಆತನ ಹಿಂದೆ ಹೋಗಿ ನಗ್ನಳಾಗಿಯೇ ರಸ್ತೆಯಲ್ಲಿ ನಡೆಯುತ್ತಾ ಕಾರಿನೊಳಗೆ ಬಂದು ಕೂರಲು ಮನವಿ ಮಾಡಿದ್ದಾಳೆ. ಅವರಿಬ್ಬರೂ ಬೀದಿಯಲ್ಲಿಯೇ ನಗ್ನರಾಗಿ ಜಗಳವಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಡಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

