ಏಷ್ಯಾ ಖಂಡದ ಹೆಗ್ಗುರುತಾಗಿರುವ ವಿಶ್ವದ ಅತಿ ಎತ್ತರದ ಪರ್ವತ ಎಂದರೆ ಅದು ‘ಮೌಂಟ್ ಎವರೆಸ್ಟ್’. ಇದು ಸಮುದ್ರ ಮಟ್ಟದಿಂದ ಸುಮಾರು 1930 ಮೀಟರ್ (ಸುಮಾರು 29,000 ಅಡಿ) ಎತ್ತರವಿದೆ. ಈ ಪರ್ವತವು ಇದೀಗ ಸಾಹಸಿಗಳ ದಟ್ಟಣೆಯಿಂದ ಸುದ್ದಿಯಾಗಿದೆ.

ಈ ಕುರಿತು ವಿಡಿಯೋ ಭಾರೀ ವೈರಲ್ ಆಗಿದೆ. ಮೌಂಟ್ ಎವರೆಸ್ಟ್‌ ಪರ್ವತ ಏರಲು ಹೋಗಿ ಕೆಲವು ಸಾವುಗಳಾದರೂ ಸಹಿತ ಈ ಪರ್ವತದ ಏರುವ ಕ್ರೇಜ್ ಕಡಿಮೆಯಾಗಿಲ್ಲ. ಇಲ್ಲಿ ಪರ್ವತಾರೋಹಿಗಳಿಂದ ‘ಟ್ರಾಫಿಕ್ ಜಾಮ್’ ಆಗಿರುವ ವಿಡಿಯೋ ವೈರಲ್ ಹರಿದಾಡುತ್ತಿದೆ.

ಇಬ್ಬರು ಈ ಟ್ರಾಫಿಕ್ ನಲ್ಲಿ ಸಿಲುಕಿ ಸಾವಿನ ಭಯ ಎದುರಿಸಿದ್ದಾರೆ. ಈ ಕುರಿತು ವಿಡಿಯೋವನ್ನು ರಾಜನ್ ದ್ವಿವೇದಿ ಎಂಬುವವರು ಮೇ 20 ರಂದು ಸಾಮಾಜಿಕ ಜಾಲತಾಣ ಹಂಚಿಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮೌಂಟ್ ಎವರೆಸ್ಟ್ ಶಿಖರದಲ್ಲಿ ಪರ್ವತಾರೋಹಿಗಳ ಉದ್ದನೆಯ ಸರತಿ ಸಾಲುಗಳನ್ನು ನೋಡಬಹುದಾಗಿದೆ. ಈ ಶಿಖರ ಏರುವಾಗ ಸಂಚಾರ ದಟ್ಟಣೆಯಾಗಿ ಪ್ರರ್ವತಾರೋಹಿಗಳು ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಇದರಲ್ಲಿ ಬ್ರಿಟಿಷ್ ಆರೋಹಿ ಡೇನಿಯಲ್ ಪ್ಯಾಟರ್ಸನ್ ಮತ್ತು ಅವರ ನೇಪಾಳಿ ಶೆರ್ಪಾ ಪಾಸ್ಟೆಂಜಿ ಎಂಬುವವರು ಪವರ್ತದಿಂದ ಇಳಿಯುವ ಸಾವಿನ ಭಯ ಎದುರಿಸಿದ್ದಾರೆ ಎಂದು ವರದಿ ಆಗಿದೆ.

ಈ ಇಬ್ಬರು ಶಿಖರದಿಂದ ಕೆಳಗೆ ಇಳಿಯುವಾಗ ಮಂಜುಗಡ್ಡೆಯಲ್ಲಿ ಸಿಲುಕಿದ್ದಾರೆ. ಅವರ ಹಿಂದೆಯೇ ಹತ್ತಾರು ಮಂದಿ ಸಾಲುಗಟ್ಟಿ ನಿಂತಿರುವುದು ಕಾಣಿಸುತ್ತದೆ. ಜೀವ ಭಯ ತೊರೆದು ಸಾಹಸ ಮಾಡುವವರಿಗೂ ಕೆಲವೊಮ್ಮೆ ಅಪಾಯ, ಸಂಕಷ್ಟಗಳು ಎದುರಾಗಿಬಿಡುತ್ತವೆ ಎಂಬುದಕ್ಕೆ ಇದೊಂದು ಉದಹಾರಣೆ ಆಗಿದೆ.

ಮೌಂಟ್ ಎವರೆಸ್ಟ್ ಹತ್ತುವುದು ಹೇಳುವುದಕ್ಕೆ ಸಾಮಾನ್ಯ ಸಂಗತಿ ಎನಿಸಿದರೂ, ವಾಸ್ತವದಲ್ಲಿ ಇದೊಂದು ಗಂಭೀರ ಮತ್ತು ಬಹಳಷ್ಟು ಸಾಹಸಹ ಕೆಲಸವಾಗಿದೆ ಎಂದು ದ್ವಿವೇದಿ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಜೊತೆಗೆ ತಾವು ಮೇ 19 ರಂದು ಬೆಳಗ್ಗೆ 6 ಗಂಟೆಗೆ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

— tern (@1goodtern) May 24, 2024