ವೈರಲ್: ಸ್ಪೋರ್ಟ್ಸ್ ಬೈಕ್ ಮೇಲೆ ಯುವಕ ಹಾಗೂ ಮಹಿಳೆಯೊಬ್ಬರು ರೀಲ್ಸ್ ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಆದರೆ ಇವರಿಬ್ಬರ ರೋಮ್ಯಾಂಟಿಕ್ ವಿಡಿಯೋಗೆ ನೆಟ್ಟಿಗಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ತಾಯಿ ಮಗನೊಂದಿಗೆ ಈ ರೀತಿ ವಿಡಿಯೋ ಮಾಡುತ್ತಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ವಿಡಿಯೋದಲ್ಲಿ ಮೀರಾ ಮೆಹ್ತಾ ಶಾರ್ಟ್ಸ್ ಹಾಕಿದ್ದಾರೆ. ಇತ್ತ ಆಕೆಯ ಮಗ ಜಾಕೆಟ್ ಧರಿಸಿದ್ದಾನೆ. ರೋಮ್ಯಾಂಟಿಕ್ ಪೋಸ್ ನೀಡಿದ ಈ ತಾಯಿ ಮಗನ ವಿಡಿಯೋಗೆ ಮೆಚ್ಚುಗೆಗಿಂತ ಟೀಕೆಗಳೇ ಹೆಚ್ಚಾಗಿದೆ. ಮಗನ ಜೊತೆಗೆ ರೋಮ್ಯಾಂಟಿಕ್ ರೀಲ್ಸ್‌ಗೆ ಕಿಡಿ ಕಾರಿದ್ದಾರೆ. ಶಾರ್ಟ್ ರೀಲ್ಸ್‌ನಲ್ಲಿ ತಾನು ಸಂತೂರ್ ಮಮ್ಮಿ, ನಾವಿಬ್ಬರು ತಾಯಿ ಮಗ ಎಂದಿದ್ದಾರೆ. ತಾಯಿ-ಮಗನ ಸಂಬಂಧ ಕುರಿತು ಹಲವರು ಪ್ರಶ್ನಿಸಿದ್ದಾರೆ. ರೀಲ್ಸ್‌ಗಾಗಿ ಈ ರೀತಿ ಸಂಬಂಧಕ್ಕೆ ಅರ್ಥವೇ ಇಲ್ಲದ ರೀತಿ ಮಾಡಬೇಡಿ.
ಭಾರತದಲ್ಲಿ ತಾಯಿ-ಮಗ ಮಾತ್ರವಲ್ಲ, ಪ್ರತಿಯೊಂದು ಸಂಬಂಧಕ್ಕೂ ಅಷ್ಟೇ ಪಾವಿತ್ರ್ಯತೆ ಇದೆ. ಆದರೆ ರೀಲ್ಸ್ ಗೀಳಿಗೆ ಈ ಸಂಬಂಧಕ್ಕೆ ಕಪ್ಪು ಚುಕ್ಕೆ ತರಬೇಡಿ ಎಂದು ಸಲಹೆ ನೀಡಿದ್ದಾರೆ. ಪರ ವಿರೋಧದ ನಡುವೆ ಈ ವಿಡಿಯೋ ಭಾರಿ ವೈರಲ್ ಆಗಿದೆ.

