ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಸೀರೆಗೆ ಮನಸೋಲದವರು ಯಾರಿದ್ದಾರೆ, ಭಾರತೀಯರೇ ಆಗಿರಲಿ ವಿದೇಶಿಯರೇ ಆಗಿರಲಿ ಸೀರೆ ಉಟ್ಟರೆ ಯಾವ ಭಾರತೀಯ ನಾರಿಗೂ ಕಮ್ಮಿ ಇಲ್ಲ .
ವಿದೇಶಿಯ ಮಹಿಳೆಯೊಬ್ಬರು ಸೀರೆ ಉಟ್ಟು ರಾಂಪ್ ವಾಕ್ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಶ್ವ ಸುಂದರಿ 2024 ರ ಪ್ರತಿಷ್ಠಿತ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಸುತ್ತಿನಲ್ಲಿ ಮಿಸ್ ಆಸ್ಟ್ರೇಲಿಯ ಸೀರೆಯುಟ್ಟು ರ್ಯಾಂಪ್ನ್ಲಿ ನಡೆದಿದ್ದು, ಸಾಂಸ್ಕೃತಿಕ ಗೌರವ ಮತ್ತು ಜಾಗತಿಕ ಏಕತೆಯ ಬಗ್ಗೆ ಪ್ರಬಲ ಸಂದೇಶವನ್ನು ರವಾನಿಸಿದೆ.
ಅದೇ ಸಂದರ್ಭದಲ್ಲಿ ಭಾರತೀಯ ಪ್ರತಿನಿಧಿ ಸಿನಿ ಶೆಟ್ಟಿ ಸಂಪ್ರದಾಯಿಕ ಲೆಹಾಂಗ ತೊಟ್ಟು ರ‍್ಯಾಂಪ್ ವಾಕ್ ಮಾಡಿದ್ದಾರೆ.
@Brinda_IND ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಮೇ 31ರಂದು ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 8ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ತಮ್ಮದೇ ಆದ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುವ ಭಾರತೀಯ ಯುವ ಪೀಳಿಗೆಗೆ ಉತ್ತಮ ಸಂದೇಶವಾಗಿದೆ.
Big Respect for Miss Australia
She is wearing Bharatiya saree & walking on ramp with such a grace & great confidence in #MissWorld. Eye Opener for Indian Youths who feel shy of their Traditions#TeamIndia #JanhviKapoor #Bollywood #TejRan #ExitPoll #SexScandal #banknifty #Anjali pic.twitter.com/DalCmNrorq
— Brinda (@Brinda_IND) May 31, 2024

