ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಮೈಕ್ರೋಸಾಫ್ಟ್ ಟೆಕ್ಕಿಯೊಬ್ಬ ಆಟೋ ಓಡಿಸುವ ಅಚ್ಚರಿಯ ದೃಶ್ಯವೊಂದು ಬೆಳಕಿಗೆ ಬಂದಿದೆ. ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುತ್ತಿರುವ ಈ ಹಿರಿಯ ಇಂಜಿನಿಯರ್ ಆಟೋ ಓಡಿಸುವಾಗ ವೆಂಕಟೇಶ್ ಗುಪ್ತಾ ಎಂಬ ಪ್ರಯಾಣಿಕರ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಮತ್ತು ಈ ವಿಷಯವನ್ನು ಸದೂರು ಯಾತ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಯಾಣಿಕ ಪೋಸ್ಟ್ ಜತೆಗೆ ಹೀಗೆ ಬರೆದಿದ್ದಾರೆ.. ‘ಒಂಟಿತನದ ವಿರುದ್ಧ ಹೋರಾಡಲು ನಮ್ಮ ಯಾತ್ರಿನಿ ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಆಟೋ ನಡೆಸುತ್ತಿರುವ ಕೋರಮಂಗಲದ 35 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅವರನ್ನು ನಾನು ಭೇಟಿಯಾದೆ.ಆ ವ್ಯಕ್ತಿ ಆಟೋರಿಕ್ಷಾದಲ್ಲಿ ಮೈಕ್ರೋ ಸಾಫ್ಟ್ ಹೂಡಿ ಧರಿಸಿದ್ದರು. ಹೀಗೇಕೆ ಆಟೋ ಓಡಿಸಬೇಕು ಎಂದು ಕೇಳಿದಾಗ ವಾರಗಟ್ಟಲೆ ಒಂಟಿತನ ಕಾಡುತ್ತಿದ್ದು, ಅದನ್ನು ಹೋಗಲಾಡಿಸಲು ಈ ಹೊಸ ದಾರಿಯನ್ನು ಆಯ್ದುಕೊಂಡಿರುವುದಾಗಿ ತಿಳಿಸಿದರು.
‘ಅವರ ಮಾತುಗಳನ್ನು ಕೇಳಿ ನಾನು ಆಘಾತಕ್ಕೊಳಗಾಗಿದ್ದೆ’ ಎಂದು ಸದೂರು ತಮ್ಮ ಪೋಸ್ಟ್‌ನ ಅಡಿಯಲ್ಲಿ ಬರೆದಿದ್ದಾರೆ, ಈ ಪೋಸ್ಟ್‌ಗೆ ಕೆಲವು ನೆಟಿಜನ್‌ಗಳು ವ್ಯಕ್ತಿ ನಿಜವಾಗಿಯೂ ಒಂಟಿತನವನ್ನು ಅನುಭವಿಸುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

