ಮೊರಾದಾಬಾದ್: ಹುಡುಗಿ ವೇಷ ಧರಿಸಿ, ಬುರ್ಖಾ ಧರಿಸಿ ಪ್ರೇಯಸಿಯನ್ನು ಮಿಟ್ ಮಾಡಲು ಬಂದು ಸಿಕ್ಕಿಬಿದ್ದವರ ಕಥೆಗಳನ್ನು ಕೇಳಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬ ಯುವಕ ತನ್ನ ಹುಡುಗಿಯನ್ನು ಭೇಟಿಯಾಗುವ ಸಲುವಾಗಿ ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ತಗ್ಲಾಕೊಂಡಿದ್ದಾನೆ. ಈತ ಮಕ್ಕಳ ಕಳ್ಳನೇ ಇರಬೇಕೆಂದು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದ್ದು, ಯುವಕನೊಬ್ಬ ಬುರ್ಖಾ ಧರಿಸಿ ಗೆಳತಿಯನ್ನು ಭೇಟಿಯಾಗಲು ಬಂದು ಸಾರ್ವಜನಿಕರ ಕೈಯಲ್ಲಿ ಧರ್ಮದೇಟು ತಿಂದಿದ್ದಾನೆ. ಆಗಸ್ಟ್ 30 ರ ಶನಿವಾರದಂದು ಯುವಕನೊಬ್ಬ ಬುರ್ಖಾ ಧರಿಸಿ ಗೆಳತಿಯನ್ನು ಭೇಟಿಯಾಗಲು ಬಂದಿದ್ದ. ಆತನ ವಿಚಿತ್ರ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ಮುಖ ಗವಸು ತೆರೆದಿದ್ದಾರೆ. ಈತ ಮಕ್ಕಳ ಕಳ್ಳನೇ ಇರಬೇಕೆಂದು ಅಲ್ಲಿನ ಜನ ಹಿಗ್ಗಾಮುಗ್ಗ ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆಯ ವೇಳೆ ಯಾರಿಗೂ ಅನುಮಾನ ಬರಬಾರದೆಂದು ಗೆಳತಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.

