ಮುಂಬೈ: ಅಟಲ್ ಸೇತುವೆ ಮಾರ್ಗದಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಟಾಟಾ ಟೆಕ್ಸಾನ್ ಕಾರ್ ಅನ್ನು ಮಾರ್ಗ ಮಧ್ಯೆ ನಿಲ್ಲಿಸಿ ಸೇತುವೆಯಿಂದ ಸಮುದ್ರಕ್ಕೆ ಜಿಗಿದಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದೊಂಬಿವೇಲಿ ನಿವಾಸ ಕೆ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. ಮುಂಬೈನ ಅಟಲ್ ಸೇತುವಿನ ಕೊನೆಯ ಪಾಯಿಂಟ್ ಆದ ನ್ಹಾವಾ ಸೇವಾ ಬಳಿ ತನ್ನ ಕಾರ್ ಪಾರ್ಕ್ ಮಾಡಿ ಬ್ರಿಡ್ಜ್ನ ಗೋಡೆಯನ್ನು ಏರಿ ಸಮುದ್ರಕ್ಕೆ ನೆಗೆದಿದ್ದಾನೆ. ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕುಟುಂಬದವರು ನೀಡಿದ ಮಾಹಿತಿ ಪ್ರಕಾರ ಶ್ರೀನಿವಾಸ್ ಕಳೆದ ಕೆಲವು ದಿನಗಳಿಂದ ವಿಪರೀತ ಹಣದ ಸಮಸ್ಯೆಯಿಂದ ಬಳಲುತ್ತಿದ್ದರಂತೆ ಅದೇ ಕಾರಣವೇ ಅವರನ್ನು ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

