ಎಲ್ಲಾ ಸಮಸ್ಯೆಗೆ ಆತ್ಮಹತ್ಯೆ ಒಂದೇ ಪರಿಹಾರ ಎಂಬುದು ಈಗಿನ ಯುವಕ ಯುವತಿಯರಿಗೆ ಸಾಮಾನ್ಯವಾಗಿ ಬಿಟ್ಟಿದೆ. ಹಿರಿಯರು, ತಿಳಿದವರು ಎಷ್ಟೇ ಬುದ್ದಿವಾದ ಹೇಳಿದರು ಕೇಳುವವರ ಸಂಖ್ಯೆ ಕಡಿಮೆಯಾಗಿದೆ. ಪ್ರೀತಿ ಮಾಡಿದವರು ಮನೆಯಲ್ಲಿ ಒಪ್ಪದಿದ್ದರೆ ಅವರ ಮುಂದಿನ ಯೋಚನೆಯೇ ಆತ್ಮಹತ್ಯೆ. ಪರಿಹಾರದ ಬಗ್ಗೆ ಯೋಚನೆಯೆ ಮಾಡುವುದಿಲ್ಲ. ಇಂತಹ ಸುದ್ಧಿಗಳು ಆಗ್ಗಾಗೆ ಕೇಳಿ ಬರುತ್ತಿರುತ್ತದೆ.
ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ಪ್ರೇಮಿಗಳಿಬ್ಬರು ನದಿಗೆ ಹಾರಿ ಅತ್ಮಹತ್ಯೆ ಮಾಡಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಮೀನುಗಾರರೊಬ್ಬರು ಆ ಇಬ್ಬರ ಪ್ರಾಣವನ್ನು ರಕ್ಷಿಸಿ ಬಳಿಕ ಸಾಯುವ ನಿರ್ಧಾರ ಮಾಡಿದ್ದಕ್ಕೆ ಪ್ರೇಮಿಯ ಕಪಾಳಕ್ಕೆ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದಿದ್ದು, ಇಲ್ಲಿನ ಗೋಲಘಾಟ್ ಬಳಿಯ ಗೋಮತಿ ನದಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ನದಿಗೆ ಹಾರುವುದನ್ನು ಕಂಡ ಮೀನುಗಾರರು ತಮ್ಮ ಜೀವದ ಹಂಗನ್ನು ತೊರೆದು ಆ ಇಬ್ಬರ ಪ್ರಾಣವನ್ನು ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಯಂತಹ ಹುಚ್ಚು ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಮೀನುಗಾರರೊಬ್ಬರು ಕೋಪದಲ್ಲಿ ಪ್ರೇಮಿಯ ಕಪಾಳಕ್ಕೆ ಸರಿಯಾಗಿ ಬಾರಿಸಿದ್ದಾರೆ.
https://x.com/priyarajputlive/status/1801908647569575997

