ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಮೋದಿಯವರು ಅದ್ಧೂರಿಯಾದ ಸಂಭ್ರಮದಲ್ಲಿ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದೇ ವೇಳೆ 72 ಸಂಸದರು ಕೂಡ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ದೇಶ-ವಿದೇಶದ ಗಣ್ಯರು, ಉದ್ಯಮಿಗಳು, ಸಿನಿಮಾ ಸ್ಟಾರ್ಸ್ ಸೇರಿದಂತೆ 8,000 ಅತಿಥಿಗಳು ಸಮಾರಂಭಕ್ಕೆ ಆಗಮಿಸಿದ್ದರು.
ಆದರೆ ಆಶ್ಚರ್ಯ ಎಂದರೆ ಈ ಕಾರ್ಯಕ್ರಮಕ್ಕೆ ಚಿರತೆಯೋ, ಹುಲಿಯೋ ಯಾವುದೋ ಒಂದು ಪ್ರಾಣಿ ಕೂಡ ಬಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಷ್ಟ್ರಪತಿ ಭವನದ ಭವ್ಯ ಆವರಣದಲ್ಲಿ ಆಹ್ವಾನಿಸದ ಅತಿಥಿಯೊಬ್ಬರು ಬಂದಿದ್ದು ಎಲ್ಲರಲ್ಲೂ ದಿಗ್ಭ್ರಮೆ ಉಂಟು ಮಾಡಿದೆ. ಬಿಜೆಪಿ ಸಂಸದ ದುರ್ಗಾ ದಾಸ್ ಅವರು ವೇದಿಕೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಅಧಿಕೃತ ಪತ್ರಗಳಿಗೆ ಸಹಿ ಹಾಕುವಾಗ ರಾಷ್ಟ್ರಪತಿ ಭವನದ ಬಾಗಿಲ ಬಳಿ ಒಳಗೆ ಪ್ರಾಣಿ ನಡೆದುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಕಾಣಿಸಿದೆ.
ಈ ಪ್ರಾಣಿ ಚಿರತೆಯೋ ಅಥವಾ ಹುಲಿಯೋ ಆಗಿರಬಹುದು ಎಂದು ನೆಟ್ಟಿಗರು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
An animal was seen strolling back in the Rashtrapati Bhavan after MP Durga Das finished the paperwork
~ Some say it was a LEOPARD while others call it some pet animal. Have a look 🐆 pic.twitter.com/owu3ZXacU3
— The Analyzer (News Updates🗞️) (@Indian_Analyzer) June 10, 2024

