ಜೈಪುರ: ಇಲ್ಲೊಬ್ಬ ವ್ಯಕ್ತಿ ಎರಡು ವರ್ಷದ ಪುಟ್ಟ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದು, 14 ತಿಂಗಳು ಮಗುವನ್ನು ತನ್ನ ಜತೆಯಲ್ಲೇ ಇರಿಸಿಕೊಂಡಿದ್ದ ಘಟನೆ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ರಾಜಸ್ಥಾನದ ಜೈಪುರ ಪೊಲೀಸರು ಪೃಥ್ವಿ ಎಂಬ ಎರಡು ವರ್ಷದ ಮಗುವನ್ನು ತನ್ನೊಂದಿಗೆ ಹೊತ್ಯೊಯ್ದು, ಉತ್ತರಪ್ರದೇಶದ ಊರಾಚೆಗಿನ ಪುಟ್ಟ ಹಟ್ಟಿಯಲ್ಲಿ ವಾಸವಾಗಿದ್ದನ್ನು. ನಿರಂತರ ಕಾರ್ಯಾಚರಣೆಯಲ್ಲಿ ಆತನನ್ನು ತಪ್ಪಿಸಿಕೊಳ್ಳದಂತೆ ಲಾಕ್ ಮಾಡಿದ ಪೊಲೀಸರ ತಂಡ, ಕಡೆಗೂ ಆರೋಪಿಯನ್ನು ಬಂಧಿಸಿ, ಆತನಿಂದ ಮಗುವನ್ನು ಕರೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ, ಈ ವೇಳೆ 14 ವರ್ಷದಿಂದ ಜತೆಗಿದ್ದ ವ್ಯಕ್ತಿಯನ್ನು ಕಳೆದುಕೊಳ್ಳಲು ಇಷ್ಟಪಡದ ಕಂದಮ್ಮ ತಾಯಿಯ ಬಳಿ ಹೋಗದೆ, ಆತನನ್ನೇ ಬಿಗಿಯಾಗಿ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದೆ.
ಆರೋಪಿಯಿಂದ ಮಗುವನ್ನು ಬಲವಂತವಾಗಿ ಬಿಡಿಸಿಕೊಂಡ ಪೊಲೀಸರು, ತಾಯಿಗೆ ಹಸ್ತಾಂತರಿಸಿದ್ದಾರೆ. ಆದ್ರೆ, ಸ್ವಂತ ಅಮ್ಮನನ್ನೇ ಪರಿಗಣಿಸದ ಮಗು, ಅಳುವುದನ್ನು ಬಿಡದೆ, ಆತನ ಬಳಿ ಕೈ ತೋರಿಸುತ ಚೀರಾಡಿದೆ. ತನ್ನನ್ನು ಬಿಡದ ಪೃಥ್ವಿಯನ್ನು ಕಂಡು ತಾನು ಕಣ್ಣೀರಿಟ್ಟ ಆರೋಪಿ, ಪೊಲೀಸ್ ಅಧಿಕಾರಿಯೊಬ್ಬರ ಆದೇಶದಂತೆ ಜೀಪು ಹತ್ತಿ ಠಾಣೆಗೆ ಹೋಗಿದ್ದಾನೆ. ವರದಿಗಳ ಪ್ರಕಾರ, ಆರೋಪಿಯು ಉತ್ತರಪ್ರದೇಶದ ವೃಂದಾವನದ ಪರಿಕ್ರಮ ಮಾರ್ಗದ ಯಮುನಾ ನದಿಯ ಬಳಿಯ ಖಾದರ್ ಪ್ರದೇಶದಲ್ಲಿ ನಿರ್ಮಿಸಿದ ಗುಡಿಸಲಿನಲ್ಲಿ ಸನ್ಯಾಸಿಯಾಗಿ ವಾಸಿಸುತ್ತಿದ್ದ. ತನ್ನ ಗುರುತನ್ನು ಮರೆಮಾಚಲು ಗಡ್ಡ ಮತ್ತು ಉದ್ದನೆಯ ಕೂದಲನ್ನು ಬೆಳೆಸಿಕೊಂಡಿದ್ದ ಎನ್ನಲಾಗಿದೆ.
Kids and their innocence!!
Child refuses to leave his kidnapper. Seems to have developed a good bonding #jaipurKidnapping #japur
— Vani Shukla (@oye_vani) August 30, 2024

