ಬೆಂಗಳೂರು: ರೇವ್‌ಪಾರ್ಟಿ ಡ್ರಗ್ಸ್ ಸೇವಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟಿ ಹೇಮಾ ಅವರ ನ್ಯಾಯಾಂಗ ಬಂಧನವನ್ನು ಮತ್ತೆ ಮುಂದೂಡಲಾಗಿದೆ.ನ್ಯಾಯಾಂಗ ಬಂಧನದಲ್ಲಿದ್ದ ಅವರು ಸಿಸಿಬಿ ಅಧಿಕಾರಿಗಳು ಒಂದು ದಿನದ ಕಸ್ಟಡಿಗೆ ತೆಗೆದುಕೊಂಡಿದ್ದರು.ಗುರುವಾರ ಆ ಅವಧಿ ಮುಕ್ತಾಯಗೊಂಡ ಕಾರಣ ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ
ಆನೇಕಲ್ನ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಬುಧವಾರ ಹೇಮಾರನ್ನು ಕೋರ್ಟ್ಗೆ ಹಾಜರುಪಡಿಸಿದ್ದ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ಅದಕ್ಕೆ ಸಮ್ಮತಿ ಕೂಡ ಸಿಕ್ಕಿತ್ತು.

