ಆಮ್ಸ್ಟರ್ಡ್ಯಾಮ್: ನೆದರಲ್ಯಾಂಡ್ 43 ವರ್ಷದ ವ್ಯಕ್ತಿಯೋರ್ವ 1,000 ಮಕ್ಕಳ ತಂದೆ ಅಂದ್ರೆ ನೀವು ನಂಬಲೇಬೇಕು. ಹೌದು, ಈತ ಹೇಳಿಕೊಳ್ಳುವಂತೆ ವಿವಿಧ ದೇಶಗಳಲ್ಲಿ ಈತನ ಮಕ್ಕಳಿವೆ.
ಈಗ ಒಂದೇ ಒಂದು ಮಗುವಾದ್ರೆ ಈತನಿಗೆ ಅಲ್ಲಿಯ ಸರ್ಕಾರ 91 ಲಕ್ಷ ದಂಡ ವಿಧಿಸಲು ಸಿದ್ಧವಾಗುತ್ತಿದೆ. ಹಾಗಾಗಿ ಈತ ಮಕ್ಕಳು ಪಡೆಯುವ ಪ್ರಕ್ರಿಯೆಯಿಂದ ನಿವೃತ್ತಿ ಹೊಂದಿರೋದಾಗಿ ಹೇಳಿಕೊಂಡಿದ್ದಾನೆ.
43 ವರ್ಷದ ಈ ವ್ಯಕ್ತಿಯ ಹೆಸರು ಜೋನಥಾನ್ ಜಾಕೋಬ್ ಮೋಯರ್, ಈತ ನೆದರಲ್ಯಾಂಡ್ ನಿವಾಸಿಯಾಗಿದ್ದಾನೆ. ಸಮಾಜಸೇವೆ ಮಾಡಬೇಕೆಂದು ಯೋಚಿಸಿದ ಜೋನಥಾನ್ ವೀರ್ಯ ದಾನಿಯಾಗಿ ಗುರುತಿಸಿಕೊಂಡಿದ್ದನು. ಸರ್ಕಾರದಿಂದ ದಂಡ ಬೀಳುತ್ತೆ ಎಂಬ ವಿಷಯ ಗೊತ್ತಾಗುತ್ತಲೇ ವೀರ್ಯದಾನವನ್ನು ನಿಲ್ಲಿಸಿರೋದಾಗಿ ಜೋನಾಥನ್ ಹೇಳಿಕೊಂಡಿದ್ದಾನೆ.
ಈ ವ್ಯಕ್ತಿಯ ಅಂದಾಜು ಲೆಕ್ಕದ ಪ್ರಕಾರ, ಈತನಿಗೆ 550ಕ್ಕೂ ಹೆಚ್ಚು ಮಕ್ಕಳಿವೆ. ಆದ್ರೆ ಡಾಕ್ಯುಮೆಂಟರಿಯಲ್ಲಿ ವರದಿ ಪ್ರಕಾರ ಜೋನಥಾನ್ ಸಾವಿರ ಮಕ್ಕಳ ತಂದೆಯಾಗಿದ್ದಾನೆ. ವೀರ್ಯದಾನಿಯಾಗಿದ್ದ ಜೋನಥಾನ್ ಸಹ ಎಷ್ಟು ಮಕ್ಕಳಿವೆ ಎಂಬುದರ ಬಗ್ಗೆ ನಿಖರ ಲೆಕ್ಕ ಇರಿಸಿಲ್ಲ ಮತ್ತು ನನಗೆ ಅವರ ಬಗ್ಗೆ ಯಾವ ಭಾವನೆಗಳು ಇಲ್ಲ ಎಂದು ಜೋನಾಥನ್ ಹೇಳುತ್ತಾನೆ.
ಜೀವನದಲ್ಲಿ ಸಾರ್ಥಕವಾದ ಕೆಲಸ ಮಾಡಬೇಕು ಎಂದು ನಾನು ವೀರ್ಯ ದಾನ ಮಾಡಲು ಮುಂದಾದೆ. ತನ್ನ ದೇಶ ಮಾತ್ರವಲ್ಲದೇ ವಿದೇಶದ ಹಲವು ದಂಪತಿಗೆ ನಾನು ಸ್ಪರ್ಮ್ ದಾನವಾಗಿ ನೀಡಿದ್ದೇನೆ. ನಾನು ವೀರ್ಯ ದಾನ ಮಾಡುವದರಿಂದ ದಂಪತಿ ತಂದೆ-ತಾಯಿಯಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಜೋನಾಥನ್ ಹೇಳುತ್ತಾನೆ. ಈತನ ವೀರ್ಯದಿಂದ ಮಕ್ಕಳನ್ನು ಪಡೆದುಕೊಂಡಿರುವ ದಂಪತಿ ಭವಿಷ್ಯದಲ್ಲಿ ತಮ್ಮ ಮಲಸೋದರ/ರಿಯರ ಜೊತೆ ಸಂಬಂಧ ಬೆಳೆಸಿದ್ರೆ ಹೇಗೆ ಎಂದು ಭಯಗೊಂಡಿದ್ದಾರೆ.
ಇನ್ನು ಒಂದೇ ಒಂದು ಮಗುವಾದರೂ ಜೋನಾಥನ್ ಜಾಕೋಬ್ ಮೇಯರ್ 91 ಲಕ್ಷ ಬೀಳಲಿದೆ. ಈ ಹಿನ್ನೆಲೆ ಜೋನಾಥನ್ ವೀರ್ಯದಾನದಿಂದ ನಿವೃತ್ತಿ ಘೋಷಿಸಿದ್ದಾನೆ.

