ನವದೆಹಲಿ: ಐಫೋನ್‌ 16 ಮಾರಾಟ ಆರಂಭವಾಗಿದ್ದು, ಆಪಲ್‌ ಅಂಗಡಿಗಳ ಮುಂದೆ ಜನ ಕ್ಯೂ ನಿಂತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇಂದು ಬಿಡುಗಡೆಯಾದ ಆ್ಯಪಲ್ ಕಂಪನಿಯ ಐಫೋನ್‌ನ 16ನೇ ಸರಣಿಯ ವಿವಿಧ ಸ್ಮಾರ್ಟ್‌ಫೋನ್‌ಗಳ ಮಾರಾಟ ಭಾರತದಲ್ಲಿ ಆರಂಭವಾಗಿದೆ. ಇದು ಮಾರಾಟವು ಪ್ರಾರಂಭವಾಗುತ್ತಿದ್ದಂತೆ, ಜನರು ಮುಂಬೈ ಮತ್ತು ದೆಹಲಿಯ ಆಪಲ್ ಸ್ಟೋರ್‌ಗಳ ಹೊರಗೆ ಫೋನ್‌ ಖರೀದಿಸಲು ಕ್ಯೂನಲ್ಲಿ ನಿಂತಿದ್ದಾರೆ.

ವೈರಲ್‌ ಆದ ವಿಡಿಯೋದಲ್ಲಿ ಮುಂಬೈನ ಬಿಕೆಸಿಯಲ್ಲಿರುವ ಕಂಪನಿಯ ಅಂಗಡಿಯ ಹೊರಗೆ ಮೊಬೈಲ್ ಫೋನ್‌ಗಳನ್ನು ಪಡೆಯಲು ಹೆಚ್ಚಿನ ಸಂಖ್ಯೆಯ ಜನರು ಸರದಿಯಲ್ಲಿ ನಿಂತಿರುವುದನ್ನು ನೋಡಬಹುದಾಗಿದೆ.