ಹೈದರಾಬಾದ್‌: ಸೋಶಿಯಲ್​​ ಮೀಡಿಯಾ ಪ್ರಭಾವಿಯೊಬ್ಬ ಕಂತೆ ಕಂತೆ ನೋಟುಗಳನ್ನು ರಸ್ತೆಗೆ ಎಸೆದಿರುವ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ನಡೆದಿದೆ.

ವಾಹನ ದಟ್ಟನೆಯಿರುವ ನಡು ರಸ್ತೆಯಲ್ಲೇ ನಿಂತು ಈ ಯುವಕ ನೋಟುಗಳನ್ನು ರಸ್ತೆಗೆ ಎಸೆದಿದ್ದು, ನೋಟುಗಳ ಸುರಿಮಳೆ ಸುರಿಯುತ್ತಿದ್ದಂತೆ ಸ್ಥಳೀಯರು ಶಾಕ್​ ಆಗಿದ್ದಾರೆ. ಹಣದ ಸುರಿಮಳೆಯನ್ನು ಕಂಡು ಜನರು ಹಣ ಹೆಕ್ಕಲು ಮುಗಿಬಿದ್ದಿದ್ದಾರೆ.

@indian66669296 ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗಿದೆ. ಇನ್ನು ವಿಡಿಯೋದಲ್ಲಿ ಯುವಕ ಎರಡೂ ಕೈಗಳಲ್ಲಿ ಕಂತೆ ಕಂತೆ ನೋಟುಗಳನ್ನು ಇಟ್ಟುಕೊಂಡು ರಸ್ತೆಯ ವಾಹನ ಸಂಚಾರದ ನಡುವೆಯೂ ಹಣ ಎಸೆಯುತ್ತಿರುವುದು ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

— Mahesh Goud 🚩 #9999# (@indian66669296) August 21, 2024